ಕಾಸರಗೋಡು: ಪೋಕ್ಸೋ ಪ್ರಕರಣದ ಆರೋಪಿಯ ಹಿರಿಯ ಸಹೋದರನನ್ನು ಅಪಹರಿಸಿ, ಅಮಾನವೀಯವಾಗಿ ಥಳಿಸಿದ ಆರೋಪದ ಮೇಲೆ ಬೇಕಲ ಠಾಣೆಯ ಪ್ರಿನ್ಸಿಪಲ್ ಎಸ್ಐ ಕೆ.ಪಿ. ಶರತ್, ಶೂರನಾಡ್ ಗ್ರೇಡ್ ಎಸ್ಐ ಆರ್. ಶ್ರೀಕುಮಾರ್ ಹಾಗೂ ಶಾಸ್ತಾಮಕೋಟ ಠಾಣೆಯ ಸಿಪಿಒ ವಿಪಿನ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ.

ಕಳೆದ ಮೇ 29ರಂದು ಶಾಸ್ತಾಮಕೋಟ ಪೊಲೀಸರು ಆರೋಪಿಯ ಶೋಧಕ್ಕಾಗಿ ಅಡೂರಿಗೆ ಆಗಮಿಸಿದ್ದರು. ಈ ವೇಳೆ ಆತನ ಅಣ್ಣನನ್ನು ಖಾಸಗಿ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದು, ಪ್ರಯಾಣದ ನಡುವೆ ಗುಪ್ತಾಂಗಕ್ಕೂ ಹಾನಿಯಾಗುವಂತೆ ತೀವ್ರ ಹಲ್ಲೆ ನಡೆಸಿದ್ದರು ಎಂದು ದೂರು ದಾಖಲಾಗಿತ್ತು.

ಘಟನೆ ಕುರಿತು ತನಿಖೆ ನಡೆಸಿದ ಪತ್ತನಂತಿಟ್ಟ ಎಸ್ಪಿ, ಪೊಲೀಸರ ಮೇಲಿನ ಆರೋಪ ಹಾಗೂ ಕರ್ತವ್ಯಲೋಪವನ್ನು ದೃಢಪಡಿಸಿ ಐಜಿಗೆ ವರದಿ ಸಲ್ಲಿಸಿದ್ದರು.ಈ ವರದಿಯನ್ನು ಆಧರಿಸಿ ಇದೀಗ ತಪ್ಪಿತಸ್ಥ ಮೂವರು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದೆ.

