ಬಾವಿಗೆ ಬಿದ್ದ ಆಡನ್ನು ರಕ್ಷಿಸಲು ಇಳಿದು ಸಿಲುಕಿದ ವ್ಯಕ್ತಿ; ಅಗ್ನಿಶಾಮಕ ದಳದಿಂದ ರಕ್ಷಣೆ

​ಕಾಸರಗೋಡು: ಮುಳಿಯಾರು ಮಾಸ್ತಿಕುಂಡ್‌ನಲ್ಲಿ ಬಾವಿಗೆ ಬಿದ್ದ ಆಡನ್ನು ರಕ್ಷಿಸಲು ಹೋಗಿ ಅಪಾಯಕ್ಕೆ ಸಿಲುಕಿದ್ದ ನೆರೆಮನೆಯ ಅಶ್ರಫ್ (45) ಎಂಬವರನ್ನು ಅಗ್ನಿಶಾಮಕ ದಳ ಯಶಸ್ವಿಯಾಗಿ ಮೇಲಕ್ಕೆತ್ತಿದೆ.

​ ಗುರುವಾರ ಸಂಜೆ ಮುಸ್ತಫ ಎಂಬವರ ಮನೆ ಬಳಿಯ 50 ಅಡಿ ಆಳದ ಬಾವಿಗೆ ಆಡು ಬಿದ್ದಿತ್ತು. ಅದನ್ನು ರಕ್ಷಿಸಲು ಇಳಿದ ಅಶ್ರಫ್ ಅವರಿಗೆ ತರುವಾಯ ಮೇಲಕ್ಕೇರಲು ಸಾಧ್ಯವಾಗದೆ ತೊಂದರೆಗೀಡಾಗಿದ್ದರು.

ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿ ಬಿ.ಎಸ್. ಸುಬಿಲ್ ಅವರು ಬಾವಿಗಿಳಿದು ಬಲೆಯ ಸಹಾಯದಿಂದ ಅಶ್ರಫ್‌ರನ್ನು ಸುರಕ್ಷಿತವಾಗಿ ಹೊರತೆಗೆದರು.

ಆಡನ್ನು ರಕ್ಷಿಸಲು ಸಾಧ್ಯವಾಗದೆ ಅದು ಸಾವನ್ನಪ್ಪಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ಅಶ್ರಫ್ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ನಾಗರಿಕರು ಭಾಗವಹಿಸಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!