ಕಾಸರಗೋಡು: ಜಿಲ್ಲೆಯ ಪೆರ್ಲ ಗುಡ್ಡೆಂಗೇರಿಯಲ್ಲಿ ಕೆಎಸ್ಇಬಿಗೆ ಸೇರಿದ ವಿದ್ಯುತ್ ಕೇಬಲ್ಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ಬಿ.ಸಿ. ರೋಡ್ ಮೂಲದ ನೌಷಾದ್ (34), ಕಿದೂರು ಮೂಲದ ಮುಹಮ್ಮದ್ (41), ಹಾಗೂ ಕರ್ನಾಟಕ ಮೂಲದ ಸಾಹಿದ್ (29) ಮತ್ತು ನವೀನ್ (48) ಬಂಧಿತ ಆರೋಪಿಗಳಾಗಿದ್ದಾರೆ.

ಈ ಪ್ರಕರಣದಲ್ಲಿ ಇನ್ನು ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಈ ತಿಂಗಳ 24ರಂದು ಮುಖವಾಡ ಧರಿಸಿ ಬಂದ ಕಳ್ಳರ ತಂಡವು, ಪೆರ್ಲ ಎಲೆಕ್ಟ್ರಿಕಲ್ ಸೆಕ್ಷನ್ ವ್ಯಾಪ್ತಿಯಲ್ಲಿ ಇರಿಸಲಾಗಿದ್ದ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ 1,000 ಮೀಟರ್ ಉದ್ದದ ಎಲ್ಟಿಎಬಿ ಕೇಬಲ್ಗಳನ್ನು ಪಿಕಪ್ ವ್ಯಾನ್ನಲ್ಲಿ ಕೊಂಡೊಯ್ದಿತ್ತು.

ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸಿದ ಬದಿಯಡ್ಕ ಪೊಲೀಸರು, ಕರ್ನಾಟಕಕ್ಕೆ ಪರಾರಿಯಾಗಿದ್ದ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿ, ಕಳವು ಮಾಡಿದ್ದ ಕೇಬಲ್ಗಳನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ಗೆ ಒಳಪಡಿಸಲಾಗಿದೆ.

