ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮದ್ಯದ ಅಮಲಿನಲ್ಲಿ ಯುವಕನ ರಂಪಾಟ: ಪೊಲೀಸರ ವಶಕ್ಕೆ

​ಕಾಸರಗೋಡು: ಚಿಕಿತ್ಸೆಯಲ್ಲಿರುವ ಪತ್ನಿಯನ್ನು ನೋಡಲು ಮದ್ಯದ ಅಮಲಿನಲ್ಲಿ ಬಂದ ಯುವಕನೊಬ್ಬ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಭಾರಿ ರಂಪಾಟ ನಡೆಸಿದ್ದಾನೆ.

ಕಸಬಾ ಕಡಪ್ಪುರ ನಿವಾಸಿಯಾದ ಈತನನ್ನು ಕಸಬಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ಅತಿಕ್ರಮವಾಗಿ ನುಗ್ಗಿದ ಯುವಕ, ಅಲ್ಲಿದ್ದ ರೋಗಿಗಳು ಹಾಗೂ ಅವರ ಉಪಚಾರಕರ ಮೇಲೆ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಸೃಷ್ಟಿಸಿದ್ದಾನೆ.

ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಭದ್ರತಾ ಸಿಬ್ಬಂದಿ ತಕ್ಷಣ ಆತನನ್ನು ಹಿಡಿದು ಹೊರಗೆಳೆದು, ಪೊಲೀಸರಿಗೆ ಒಪ್ಪಿಸಿದ್ದಾರೆ.

ರೋಗಿಗಳ ನೆಮ್ಮದಿಗೆ ಭಂಗ ತಂದ ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಠಾಣೆಗೆ ಕರೆದೊಯ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!