ಮಂಜೇಶ್ವರ: ಹೊಳೆಯಲ್ಲಿ ಮುಳುಗಿ ಅನ್ಯರಾಜ್ಯ ಕಾರ್ಮಿಕ ಸಾವು

ಮಂಜೇಶ್ವರ: ಇಲ್ಲಿನ ವಾಮಂಜೂರು ಹೊಳೆಯಲ್ಲಿ ಇಂದು ಮಧ್ಯಾಹ್ನ ಗೆಳೆಯರೊಂದಿಗೆ ಈಜಲು ಇಳಿದಿದ್ದ ಅನ್ಯರಾಜ್ಯದ ಕಾರ್ಮಿಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

​ಪಶ್ಚಿಮ ಬಂಗಾಳ ಮೂಲದ ವಿಶ್ವಾಸ್ ಬರ್ಮನ್ ಮೃತಪಟ್ಟ ದುರ್ದೈವಿ.

ಘಟನೆ ನಡೆದ ತಕ್ಷಣ ಸ್ಥಳೀಯರ ನೆರವಿನಿಂದ ಶವವನ್ನು ನೀರೊಳಗಿನಿಂದ ಮೇಲಕ್ಕೆತ್ತಿ, ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಈ ಕುರಿತು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!