ಬಾಯಾರು ಆರೋಗ್ಯ ಕೇಂದ್ರದಲ್ಲಿ ಅವಧಿ ಮೀರಿದ ಮಾತ್ರೆ ವಿತರಣೆ: ಆಸ್ಪತ್ರೆಯ ಬೇಜವಾಬ್ದಾರಿಯನ್ನು ಖಂಡಿಸಿ ಸಿಪಿಎಂ ಪ್ರತಿಭಟನೆ

ಪೈವಳಿಕೆ: ಚಿಪ್ಪಾರ್ ನಿವಾಸಿ ಅಹಮ್ಮದ್ ರಿಫಾಸ್ ಎಂಬ ಬಾಲಕನಿಗೆ ಬಾಯಾರು FHCಯಲ್ಲಿ ಅವಧಿ ಮೀರಿದ ಮಾತ್ರೆ ವಿತರಿಸಿದ ಘಟನೆ ಖಂಡಿಸಿ, ಸಿಪಿಎಂ ಪೈವಳಿಕೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಬಾಯಾರು ಆರೋಗ್ಯ ಕೇಂದ್ರಕ್ಕೆ ಬಹುಜನ ಮಾರ್ಚ್ ನಡೆಯಿತು.

ಸೆಪ್ಟೆಂಬರ್ 16ರಂದು ಅಹಮ್ಮದ್ ರಿಫಾಸ್‌ಗೆ ಆರೋಗ್ಯ ಕೇಂದ್ರದಿಂದ ಅವಧಿ ಮೀರಿದ ಮಾತ್ರೆ ನೀಡಲಾಗಿತ್ತು. ಆಸ್ಪತ್ರೆಯ ಬೇಜವಾಬ್ದಾರಿಯನ್ನು ಖಂಡಿಸಿ ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಿಪಿಎಂ ಪ್ರತಿಭಟನೆ ನಡೆಸಿತು.

ಮಾರ್ಚ್ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸ್ ಠಾಣಾಧಿಕಾರಿ ವಿಷ್ಣು ಅವರ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಆಸ್ಪತ್ರೆಯ ಮುಂಭಾಗದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.


ಬಳಿಕ ರಸಾಕ್ ಚಿಪ್ಪಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಸಿಪಿಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಸಿಜಿ ಮ್ಯಾಥ್ಯೂ ಉದ್ಘಾಟಿಸಿದರು.

ಸಭೆಯಲ್ಲಿ ಪುರುಷೋತ್ತಮ ಬಳ್ಳೂರು, ಹಾರಿಸ್ ಪೈವಳಿಕೆ, ಅಶೋಕ ಬಂಡಾರಿ, ಚಂದ್ರ ನಾಯ್ಕ್ ಹಾಗೂ ಬಶೀರ್ ಬಿಎ ಮಾತನಾಡಿದರು. ವಿನಯ್ ಕುಮಾರ್ ಸ್ವಾಗತಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!