ಕಾಸರಗೋಡು: ಸೋಮವಾರ ಮುಂಜಾನೆ ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಸಿಪಿಎಂ ಕಾರ್ಯಕರ್ತನ ಸ್ಕೂಟರ್ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಭಸ್ಮಗೊಳಿಸಿದ್ದಾರೆ.
ನೀಲೇಶ್ವರ ಕೋಯಾಬುರಂ ಇಟ್ಟುಪಾರದ ಪ್ರಕಾಶನ್ ಎಂಬವರ ಮನೆಮುಂದೆ ನಿಲ್ಲಿಸಿದ್ದ ಸ್ಕೂಟರ್ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೃತ್ಯದ ಸುದ್ದಿ ತಿಳಿಯುತ್ತಿದ್ದಂತೆ ನಗರಸಭಾ ಕೌನ್ಸಿಲರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ತಕ್ಷಣವೇ ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಕೌನ್ಸಿಲರ್ ಒತ್ತಾಯಿಸಿದ್ದಾರೆ.
ಪ್ರಕಾಶನ್ ನೀಡಿದ ದೂರಿನ ಆಧಾರದಲ್ಲಿ ನೀಲೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ಕೈಗೆತ್ತಿಕೊಂಡಿದ್ದಾರೆ.



Registering my account took less than a minute. It is great to see a platform that values the users time. Sign up at 32jililoginregisteronline today.