ಬಿಜೆಪಿ ನಾಯಕರ ಮೇಲಿನ ಹಲ್ಲೆ ಖಂಡಿಸಿ ವರ್ಕಾಡಿಯಲ್ಲಿ ಪ್ರತಿಭಟನೆ

ಮಜೀರ್ಪಳ್ಳ :ಕೇರಳದಲ್ಲಿ ಬಿಜೆಪಿ ನೇತಾರರ ಮೇಲಿನ ಹಲ್ಲೆ ಹಾಗೂ ಪಕ್ಷ ಕಚೇರಿಗೆ ಮೇಲೆ ಕಾಂಗ್ರೆಸ್ ಗೂoಡ ಗಿರಿ ತೋರುವ ವಿರುದ್ಧ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಮಜೀರ್ಪಳ್ಳ ಪೇಟೆಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.

ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅಧ್ಯಕ್ಷತೆ ವಹಿಸಿದ್ದರು. ಕೇರಳ ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ಹರೀಶ್ಚಂದ್ರ ಮಂಜೇಶ್ವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಾಂಗ್ರೆಸ್ ಕೇರಳದಲ್ಲಿ ಆರಾಜಕತೆ ಸೃಷ್ಟಿಸುತ್ತಿದೆ ಅಧಿಕಾರ ಮದದಲ್ಲಿ ಕಾಂಗ್ರೆಸ್ ಕಮ್ಯುನಿಸ್ಟ್ ನ್ನು ಹಿಂದಿಕ್ಕುತಿದೆ ಎಂದು ಆರೋಪಿಸಿದರು. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸಲೀಲ್ ಮಾಸ್ಟರ್ ಮಾತನಾಡಿ ಕೇರಳದ ಮಂತ್ರಿಗಳಿಗೆ ಸoಚಾರಿಸಲು ಕೋಟಿ ಬೆಲೆಯ ಕಾರುಗಳನ್ನು ಮಾಫಿಯದವರು ಉಚಿತ ವಾಗಿ ನೀಡುತ್ತಿದ್ದಾರೆ.. ಮುಖ್ಯಮಂತ್ರಿ ಒಂದು ಜಿಲ್ಲೆಯಿಂದ ಇನೊಂದು ಜಿಲ್ಲೆಗೆ ಪ್ರೈವೇಟ್ ವಿಮಾನ ದಲ್ಲಿ ಸಂಚಾರಿಸುತ್ತಿದ್ದಾರೆ ಎಂದು ದೂರಿದರು.


ಮುಖಂಡರಾದ ಮಣಿಕಂಠ ರೈ, ಭಾಸ್ಕರ್ ಪೊಯ್ಯೇ, ರವಿ ರಾಜ್, ಯಾದವ ಬಡಾಜೆ, ಕೀರ್ತಿ ಭಟ್, ಚಂದ್ರಹಾಸ ಪೂಜಾರಿ, ಕೆ ವಿ ಭಟ್, ನೇತೃತ್ವ ನೀಡಿದರು. ಯತೀರಾಜ್ ಶೆಟ್ಟಿ ಸ್ವಾಗತಿಸಿ, ತುಳಸಿ ಕುಮಾರಿ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!