ಕಾಸರಗೋಡು: ಪೋಕ್ಸೋ ಪ್ರಕರಣವೊಂದರಲ್ಲಿ ಈಗಾಗಲೇ ಜೀವಪರ್ಯಂತ ಶಿಕ್ಷೆಗೆ ಗುರಿಯಾಗಿ ಕಣ್ಣೂರು ಜೈಲು ಸೇರಿರುವ ಆರೋಪಿಗೆ, ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯವು 46 ವರ್ಷಗಳ ಕಠಿಣ ಸಜೆ ಹಾಗೂ ರೂ .62,000 ದಂಡ ವಿಧಿಸಿ ತೀರ್ಪು ನೀಡಿದೆ.

ಹೊಸದುರ್ಗ ಪೂಜಾಂವಿ ನಿವಾಸಿ ಮೂಲತಃ ಕೊಡಗು ನಾಪೋಕ್ಲು ನ ಪಿ.ಎ. ಸಲೀಂ (37) ಶಿಕ್ಷೆಗೆ ಒಳಗಾದ ಅಪರಾಧಿ.
2022ರಲ್ಲಿ ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ 14 ವರ್ಷದ ಬಾಲಕಿಯನ್ನು ಶಾಲೆಗೆ ಬಿಡುವುದಾಗಿ ಬೈಕ್‌ನಲ್ಲಿ ಕರೆದೊಯ್ದು, ಕಾಡಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾಗಿದೆ.

ನ್ಯಾಯಾಧೀಶ ಪಿ.ಎಂ. ಸುರೇಶ್ ಅವರು ಪೋಕ್ಸೋ ಕಾಯ್ದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಈ ಸಜೆ ವಿಧಿಸಿದ್ದು, ದಂಡ ತೆರಲು ತಪ್ಪಿದರೆ ಹೆಚ್ಚುವರಿ 1 ವರ್ಷ 2 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
2024ರಲ್ಲಿ 9 ವರ್ಷದ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದಕ್ಕಾಗಿ ಈತನಿಗೆ ಇತ್ತೀಚೆಗಷ್ಟೇ ಜೀವಪರ್ಯಂತ ಶಿಕ್ಷೆಯಾಗಿತ್ತು.

