ಮಂಗಳೂರಿನಲ್ಲಿ ಸಿಪಿಐ, ಸಿಪಿಐಎಂ, ಆಪ್ ಪಕ್ಷಗಳಿಂದ ಜಂಟಿ ಪ್ರತಿಭಟನೆ
ಚುನಾವಣಾ ಆಯೋಗದ ಪ್ರಧಾನ ಆಯುಕ್ತ ಗ್ಯಾನೇಶ್ ಕುಮಾರ್ ಪದಚ್ಯತಿಗೆ ಆಗ್ರಹಿಸಿ ಮಂಗಳೂರು ಮಿನಿ ವಿಧಾನ ಸೌಧದ ಮುಂಭಾಗ ಸಿಪಿಐ, ಸಿಪಿಐಎಂ, ಆಪ್ ಪಕ್ಷಗಳು ಜಂಟಿಯಾಗಿ ಪ್ರತಿಭಟನಾ ಪ್ರದರ್ಶನ ನಡೆಸಿದವು.

ಎಎಪಿ ಜಿಲ್ಲಾಧ್ಯಕ್ಷ ಡಾ. ವಿಶು ಕುಮಾರ್ ಮಾತನಾಡುತ್ತಾ, ಗ್ಯಾನೇಶ್ ಕುಮಾರ್ ಚುನಾವಣಾ ಆಯುಕ್ತರಾಗುವ ಪೂರ್ವದಲ್ಲೆ ಭ್ರಷ್ಟಾಚಾರಕ್ಕೆ ಕುಖ್ಯಾತರಾಗಿದ್ದರು. ಇಂತಹ ಕಳಂಕಿತನನ್ನು ಚುನಾವಣಾ ಆಯೋಗದ ಮುಖ್ಯಸ್ಥರಾಗಿ ನೇಮಕಾಮಾಡಿರುವುದೇ ಭಾರತ ದೇಶದ ದೊಡ್ಡ ದುರಂತ ಎಂದು ಹೇಳಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್ ಮಾತನಾಡುತ್ತಾ, ಬಿಜೆಪಿ ಅಧಿಕಾರವನ್ನು ಶಾಶ್ವತವಾಗಿಸಲು ದೇಶದಲ್ಲಿ ಗಾಢವಾದ ಪಿತೂರಿಗಳು ನಡೆಯುತ್ತಿವೆ. ಮೋದಿ, ಅಮಿತ್ ಶಾ ಅನತಿಯಂತೆ ಗ್ಯಾನೇಶ್ ಕುಮಾರ್ ಅಧಿಕಾರ ಚಲಾಯಿಸುತ್ತಿದ್ದಾರೆ. ಎಸ್ಐಆರ್ ಅಂತಹ ಒಂದು ಅಜೆಂಡಾ. ಬಿಜೆಪಿಗೆ ಮತ ಹಾಕದ ಮತದಾರನ್ನು ಮತದಾರರ ಪಟ್ಟಿಯಿಂದಲೆ ಕಿತ್ತು ಹಾಕುವ ತಂತ್ರದ ಹಿಂದೆ ದೇಶದಲ್ಲಿ ಚುನಾವಣೆಗಳನ್ನು ಏಕಪಕ್ಷೀಯವಾಗಿಸುವ, ಪ್ರಜಾಪ್ರಭುತ್ವವನ್ನೆ ಪ್ರಹಸನವಾಗಿಸುವ ಹುನ್ನಾರ ಇದೆ ಎಂದು ಆರೋಪಿಸಿದರು. ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ ಯಾದವ ಶೆಟ್ಟಿ ಮಾತನಾಡುತ್ತಾ, ಬಿಹಾರ, ಬಂಗಾಳದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸುವುದರಲ್ಲಿ ಗ್ಯಾನೇಶ್ ಕುಮಾರ್ ಪಾತ್ರ ಇದೆ. ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ತೀವ್ರ ಪರಿಷ್ಕರಣೆ ಹೆಸರಿನಲ್ಲಿ ವ್ಯವಸ್ಥಿತವಾಗಿ ಹೊರಗಿಟ್ಟು ಬಿಜೆಪಿ ಏಕಪಕ್ಷೀಯವಾಗಿ ಗೆಲುವು ಸಾಧಿಸುವಂತೆ ಮಾಡಲಾಯಿತು. ಆರ್ ಎಸ್ ಎಸ್ ಪ್ರಾಯೋಜಿತ ಪಿತೂರಿ ಗ್ಯಾನೇಶ್ ಕುಮಾರ್ ಎಂಬ ಸೂತ್ರದ ಗೊಂಬೆಯ ಮೂಲಕ ಜಾರಿಯಾಗುತ್ತಿದೆ. ಗ್ಯಾನೇಶ್ ಕುಮಾರ್ ಪದಚ್ಯುತಿವರಗೆ ಹೋರಾಟ ಮುಂದುವರಿಯಲಿದೆ ಎಂದು ಯಾದವ ಶೆಟ್ಟಿ ಹೇಳಿದರು.

ಸಿಪಿಐ ಎಂ ಮುಖಂಡರಾದ ಮುನೀರ್ ಕಾಟಿಪಳ್ಳ, ವಸಂತ ಆಚಾರಿ, ಸದಾಶಿವ ದಾಸ್, ಜಯಂತಿ ಶೆಟ್ಟಿ ಜಪ್ಪಿನಮೊಗರು, ಬಿ ಎಮ್ ಭಟ್, ಸಿಪಿಐನ ವಿ ಕುಕ್ಯಾನ್, ಸೀತಾರಾಮ ಬೇರಿಂಜೆ, ಕರುಣಾಕರ ಮಾರಿಪಳ್ಳ, ಎಎಪಿ ಯ ಎಸ್ ಎಲ್ ಪಿಂಟೊ, ಹಬೀಬ್ ಖಾದರ್ ಮುಂತಾದವರು ಉಪಸ್ಥಿತರಿದ್ದರು.
ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಪಿಐ ಜಿಲ್ಲಾ ಮಂಡಳಿ ಸದಸ್ಯ ಸುರೇಶ್ ಕುಮಾರ್ ಬಂಟ್ವಾಳ ದನ್ಯವಾದ ಸಲ್ಲಿಸಿದರು.
ಮುನೀರ್ ಕಾಟಿಪಳ್ಳ
ಜಿಲ್ಲಾ ಕಾರ್ಯದರ್ಶಿ, ಸಿಪಿಐಎಂ ದಕ್ಷಿಣ ಕನ್ನಡ


Really impressed with the transparency and the odds. I will be spending most of my free time on idrusia777 from now on.