ಇತಿಹಾಸ ಪ್ರಸಿದ್ಧ ಮಂಜೇಶ್ವರ ಕನಿಲ ಶ್ರೀ ಭಗವತಿ ಕ್ಷೇತ್ರಕ್ಕೆ ಭೇಟಿ ಕೊಟ್ಟ ಕೊಡುಗೈ ದಾನಿ ಅಸ್ತ್ರ ಗ್ರೂಪ್ CEO ಕೆ.ಎಸ್ ಲಂಚುಲಾಲ್ .

ಇತಿಹಾಸ ಪ್ರಸಿದ್ಧ ಕನಿಲ ಶ್ರೀ ಭಗವತಿ ಕ್ಷೇತ್ರದ ನವೀಕರಣ ಕೆಲಸಗಳು ಬರದಿಂದ ಸಾಗುತ್ತಿದ್ದು ಇಂದು ಕೊಡುಗೈ ದಾನಿ , ಬಡವರ ಬಂಧು ಅಸ್ತ್ರ ಗ್ರೂಪ್ ನ ಸಿ ಇ ಓ ಲಂಚುಲಾಲ್ ಕೆ. ಎಸ್ ಅವರು ಕ್ಷೇತ್ರಕ್ಕೆ ಭೇಟಿ ಕೊಟ್ಟರು. ಬರದಿಂದ ಸಾಗುವ ಜೀರ್ಣೋದ್ದಾರ ಕೆಲಸವನ್ನು ವೀಕ್ಷಿಸಿ ರೂಪುರೇಷೆ ನೋಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಜೀರ್ಣೋದ್ದಾರ ಸಮಿತಿ ಹಾಗೂ ಆಡಳಿತ ಸಮಿತಿಯಿಂದ ಲಂಚುಲಾಲ್ ರವರಿಗೆ ಕಿರು ಗೌರವಾರ್ಪಣೆಯನ್ನು ಸಮರ್ಪಿಸಿದರು. ಈ ಸಂದರ್ಭ ಮಾತನಾಡಿದ ಲಂಚುಲಾಲ್ ರವರು ..ಮೊದಲು ಅದೆಷ್ಟೋ ಬಾರಿ ನಾನು ಈ ಕ್ಷೇತ್ರಕ್ಕೆ ಬಂದಿದ್ದೆ ಮತ್ತು ಬಾಲ್ಯದಲ್ಲಿ ಮಂಜೇಶ್ವರದಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದರು. ಇಂದು ಭಗವತಿ ಮಾತೆಯು ಕ್ಷೇತ್ರಕ್ಕೆ ನನ್ನನ್ನು ಕರೆಸಿದಿದ್ದಾರೆ. ಇದರ ಹಿಂದೆ ದೇವರ ಸಂಕಲ್ಪವಿದ್ದಿರಬಹುದು , ಆ ತಾಯಿಯ ಆಶೀರ್ವಾದದಿಂದ ಖಂಡಿತಾ ಕೆಲಸ ಕಾರ್ಯಗಳು ಆದಷ್ಟು ಬೇಗ ನೆರವೇರಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ನವರು,ಆಚಾರಪಟ್ಟವರು, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು, ಆಡಳಿತ ಸಮಿತಿಯ ಅಧ್ಯಕ್ಷರು,ಸದಸ್ಯರು, ಮುಂತಾದವರು ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!