ಕಾಸರಗೋಡು: ಕಾಸರಗೋಡಿನ ಪ್ರತಿಷ್ಠಿತ ಬಿ ಇ ಎಂ ಎಚ್ಎಸ್ಎಸ್ ಶಾಲೆಯಲ್ಲಿ ಶಾಸಕರ ನಿಧಿಯಿಂದ ನೂತನವಾಗಿ ನಿರ್ಮಿಸಲಾದ ಅಡುಗೆ ಕೋಣೆಯ ಉದ್ಘಾಟನಾ ಸಮಾರಂಭವು ಅಕ್ಟೋಬರ್ 1, 2026 ರಂದು ಬೆಳಿಗ್ಗೆ ಶಾಲಾ ಆವರಣದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಶಾಲೆಯ ಪ್ರಾಂಶುಪಾಲರಾದ ಶ್ರೀ ರಾಜೇಶ್ಚಂದ್ರ ಕೆ.ಪಿ. ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಕಾಸರಗೋಡು ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ಶಾಹಿನಾ ಸಲೀಂ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಸರಗೋಡಿನ ಮಾನ್ಯ ಶಾಸಕರಾದ ಶ್ರೀ ಕಲ್ಲಟ್ರ ಮಾಹಿನ್ ಅವರು ನೂತನ ಅಡುಗೆ ಕೋಣೆಯನ್ನು ಉದ್ಘಾಟಿಸಿ “ಪೋಷಕಯುಕ್ತ ಮಧ್ಯಾಹ್ನದ ಬಿಸಿಯೂಟ ಎಲ್ಲಾ ವಿದ್ಯಾರ್ಥಿಗಳಿಗೆ ಲಭಿಸಲಿ” ಎಂದು ಮಾತನಾಡಿದರು.ಕಾಸರಗೋಡಿನ ಮಾಜಿ ಶಾಸಕರಾದ ಶ್ರೀ ಎನ್.ಎ. ನೆಲ್ಲಿಕುನ್ನು ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ನೀಡಿದ ಶಾಸಕರ ನಿಧಿಯಿಂದ ನೂತನವಾಗಿ ನಿರ್ಮಿಸಿದ ಪಾಕ ಶಾಲೆಯ ಅಗತ್ಯದ ಕುರಿತು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಮಾರಂಭದಲ್ಲಿ ಕಾಸರಗೋಡು ಪುರಸಭೆಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ವಿದ್ಯಾಶ್ರೀ, ವಾರ್ಡ್ ಕೌನ್ಸಿಲರ್ ಶ್ರೀ ರಾಮಕೃಷ್ಣ ಹೊಳ್ಳ, ಎ.ಇ.ಒ. ಶ್ರೀ ಶಶಿದರ ಎಂ., ಪಿ.ಟಿ.ಎ. ಅಧ್ಯಕ್ಷ ಶ್ರೀ ಹರೀಶ್ ಕೆ.ಆರ್., ಪಿ.ಟಿ.ಎ, ಎಸ್ಎಂಸಿ ಅಧ್ಯಕ್ಷ ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ, ಪಿಟಿಎ ಉಪಾಧ್ಯಕ್ಷ ಶ್ರೀಯುತ ಕಿಶೋರ್ ಕುಮಾರ್, ಮಾಜಿ ಪಿ ಟಿ ಎ ಅಧ್ಯಕ್ಷ ರವಿ ಕೇಳುಗುಡ್ಡೆ , ಎಂಪಿಟಿಎ ಅಧ್ಯಕ್ಷೆ ಶ್ರೀಮತಿ ಚೇತನಾ ಮುರಳಿಧರ್ ಉಪಸ್ಥಿತರಿದ್ದು ಅಭಿನಂದನಾ ನುಡಿಗಳನ್ನಾಡಿದರು. ಶಾಲೆಯ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಶಾಲೆಯ ಮುಖ್ಯೋಪಧ್ಯಾಯರಾದ ಶ್ರೀ ಗಣೇಶ ಕೆ. ಅವರು ವಂದನಾರ್ಪಣೆಗೈದರು. ಕಾರ್ಯಕ್ರಮವನ್ನು ಶ್ರೀಯುತ ಯಶವಂತ. ವೈ ನಿರೂಪಿಸಿದರು.

