ದಕ್ಷಿಣ ಕನ್ನಡ ಸಹಕಾರಿ ನೌಕರರ  ಸಹಕಾರ  ಸಂಘದಿಂದ ಎಸ್.  ಜಗದೀಶ್ಚಂದ್ರ ಅಂಚನ್‌ಗೆ  ಸನ್ಮಾನ

ಮಂಗಳೂರು: ಕ್ರೀಡಾ ಪತ್ರಿಕೋದ್ಯಮ ಕ್ಷೇತ್ರದಲ್ಲಿಸಲ್ಲಿಸಿರುವ ಗಮನಾರ್ಹ ಸೇವೆ ಹಾಗೂ ಸಾಧನೆಗಾಗಿ ‘ಬಸವಶ್ರೀ’ ಮತ್ತು’ ಸಾಧಕ ರತ್ನ’ ಪ್ರಶಸ್ತಿ ಪುರಸ್ಕೃತ ಕ್ರೀಡಾ ಅಂಕಣಕಾರ ಎಸ್.  ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ  ಅವರನ್ನು ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಸಂಘದ ಆಡಳಿತ ಮಂಡಳಿ ಸಭೆಯ ಸಂದರ್ಭದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರೂ ಆಗಿರುವ ಎಸ್. ಜಗದೀಶ್ಚಂದ್ರ ಅಂಚನ್ ಅವರನ್ನು ಆಡಳಿತ ಮಂಡಳಿಯ ನಿರ್ದೇಶಕರು ಅಭಿನಂದನೆಯ ಮೂಲಕ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಹಿರಿಯ ನಿರ್ದೇಶಕ ವಿಶ್ವೇಶ್ವರ ಐತಾಳ್, ಕ್ರೀಡಾ ಪತ್ರಿಕೋದ್ಯಮದ ಮೂಲಕ  ಎಸ್.ಜಗದೀಶ್ಚಂದ್ರ ಅಂಚನ್ ಅವರ ನಿರಂತರ ಬರವಣಿಗೆ,  ಕ್ರೀಡೆಯ ಬಗೆಗಿನ  ಅಪಾರ ಆಸಕ್ತಿ ಹಾಗೂ ಸೇವಾ ನಿಷ್ಠೆಗೆ  ದೊರೆತಿರುವ ಬಸವಶ್ರೀ ಮತ್ತು  ಸಾಧಕ ರತ್ನ ಪ್ರಶಸ್ತಿಗಳು ಸೂಕ್ತ ಮನ್ನಣೆಯಾಗಿವೆ ಎಂದು ಅಭಿನಂದಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್. ಜಗದೀಶ್ಚಂದ್ರ ಅಂಚನ್, ತಮ್ಮ ಕ್ರೀಡಾ ಪತ್ರಿಕೋದ್ಯಮದ ಪಯಣದಲ್ಲಿ ಪ್ರೋತ್ಸಾಹ, ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ  ರಾಘವ ಆರ್. ಉಚ್ಚಿಲ್, ನಿರ್ದೇಶಕರಾದ  ದಿವಾಕರ ಶೆಟ್ಟಿ ಕೆ., ವಿಶ್ವೇಶ್ವರ ಐತಾಳ್,  ಚಂದ್ರಕಲಾ ಕೆ., ಮೋಹನ್ ಎನ್., ವಿಶ್ವನಾಥ್ ಎನ್. ಅಮೀನ್, ಗೀತಾಕ್ಷಿ, ನಿಶಿತಾ ಜಯರಾಮ್ಹಾಗೂ ಪ್ರೇಮ್‌ರಾಜ್ ಭಂಡಾರಿ ಉಪಸ್ಥಿತರಿದ್ದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ ಸ್ವಾಗತಿಸಿ, ಕೊನೆಯಲ್ಲಿ  ವಂದಿಸಿದರು.

SHARE
Loading spinner

One thought on “ದಕ್ಷಿಣ ಕನ್ನಡ ಸಹಕಾರಿ ನೌಕರರ  ಸಹಕಾರ  ಸಂಘದಿಂದ ಎಸ್.  ಜಗದೀಶ್ಚಂದ್ರ ಅಂಚನ್‌ಗೆ  ಸನ್ಮಾನ”

Leave a Reply

Your email address will not be published. Required fields are marked *

error: Content is protected !!