ಅನಂತಪುರ ಕೈಗಾರಿಕಾ ಪ್ರಾಂಗಣದಲ್ಲಿ ಕಾರ್ಖಾನೆ ಅವಘಡ: ಕಾರ್ಮಿಕ ಸಾವು, ಇಬ್ಬರಿಗೆ ಗಾಯ

ಅನಂತಪುರ: ಕೈಗಾರಿಕಾ ಪ್ರಾಂಗಣದ ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡದಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಅನಂತಪುರ ಕೈಗಾರಿಕಾ ಪ್ರಾಂಗಣದಲ್ಲಿರುವ ಆಕ್ಸಿಜನ್ ಪ್ರೊಮಾಕ್ಸ್ ಫ್ಯಾಕ್ಟರಿಯಲ್ಲಿ ಬೆಳಿಗ್ಗೆ ಸುಮಾರು 10 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ.

ಕೋಳಿ ಮಾಲಿನ್ಯದಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಈ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾ ಮೂಲದ ಮಹೇಶ್ವರ್ (19) ಮೃತಪಟ್ಟಿದ್ದಾರೆ.

ಕಾರ್ಖಾನೆಯ ಬಾಯ್ಲರ್‌ನಿಂದ ಗ್ಯಾಸ್ ಬಲವಾಗಿ ಹೊರಸೂಸುತ್ತಿದ್ದ ವೇಳೆ, ಅದರ ವೇಗಕ್ಕೆ ಸಿಲುಕಿದ ಕಾರ್ಮಿಕ ಪಕ್ಕದಲ್ಲಿದ್ದ ಆಳವಾದ ಕೋಳಿ ಮಾಲಿನ್ಯದ ಹೊಂಡಕ್ಕೆ ಎಸೆಯಲ್ಪಟ್ಟರೆಂದು ತಿಳಿದುಬಂದಿದೆ. ಘಟನೆಯ ಆಘಾತದಿಂದ ಮಹೇಶ್ವರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡ ತಾನೂಜಿ (24) ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮತ್ತೋರ್ವ ಗಾಯಾಳು ಸಿದಾನಂದ್ (21) ಅವರನ್ನು ಕುಂಬಳೆ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಖಾನೆಯ ಇತರ ಕಾರ್ಮಿಕರು ಮೂವರನ್ನೂ ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!