ಈಗಾಗಲೇ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿಯ ಮಸೂದೆ ಅಂಗೀಕಾರವಾಗಿದೆ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿಯನ್ನು ನೀಡುವ ಮಸೂದೆ ಡಾಕ್ಟರ್ ಮನಮೋಹನ್ ಸಿಂಗ್ ರವರು ಪ್ರಧಾನಮಂತ್ರಿಯಾಗಿದ್ದಾಗ 2010ರಲ್ಲಿ ಮಂಡನೆಯಾಗಿತ್ತು ಆಗ ರಾಜ್ಯಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆಯಿತು ಲೋಕಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆಯಲಿಲ್ಲ. 2023ರ ಸೆಪ್ಟೆಂಬರ್ 19ರಂದು ಮತ್ತೊಮ್ಮೆ ಈ ಮಸೂದೆ ಮಂಡನೆ ಆಯಿತು ,ಅಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಚರ್ಚೆಯಾಗಿ ಸೆಪ್ಟೆಂಬರ್ 20ರಂದು ಎಲ್ಲ ಪಕ್ಷದವರು ಸೇರಿ ಸರ್ವಾನುಮತದಿಂದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಅನುಮೋದಿಸಿ ಕೊಟ್ಟಿದ್ದಾರೆ. ಮಸೂದೆ ಅನುಮೋದನೆಯಾದ ನಂತರ 2024ರ ಲೋಕಸಭಾ ಚುನಾವಣೆಗೆ ಇದನ್ನು ಪರಿಗಣಿಸಲಿಲ್ಲ .2029 ರ ಚುನಾವಣೆಗು ಇದನ್ನು ಪರಿಗಣಿಸಲು ಸಾಧ್ಯವಿಲ್ಲವೆಂದು ಈ ಹಿಂದೆ ಹೇಳಿರುತ್ತಾರೆ .ಕಾರಣ. 2011ರಲ್ಲಿ ಆದಂತಹ ದೇಶದ ಜನಗಣತಿ 2021 ರಲ್ಲಿ ಮತ್ತೆ ಆಗಬೇಕಿತ್ತು, ಆದರೆ ಅಂದು ಕರೋನ ಮಹಾಮಾರಿ ಬಂದ ಸಂದರ್ಭದಲ್ಲಿ ಜನಗಣತಿ ಕಾರ್ಯ ಮುಂದೂಡಲ್ಪಟ್ಟಿತು.
ಈಗ ಕೇಂದ್ರ ಸರ್ಕಾರ ಜಾತಿಯು ಒಳಗೊಂಡಂತೆ ಜನಗಣತಿಯನ್ನು ಆರಂಭಿಸಿದೆ. ಈ ಜನಗಣತಿ 2027 ಕ್ಕೆ ಮುಗಿಯುತ್ತದೆ. ಈ ನಡುವೆ ಕೇಂದ್ರದ ಬಿಜೆಪಿ ಸರ್ಕಾರ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳ ಹಿನ್ನೆಲೆಯಲ್ಲಿ ಅಲ್ಲಿನ ಮಹಿಳಾ ಮತದಾರರ ಮೇಲೆ ಪ್ರಭಾವವನ್ನು ಬೀರುವ ಸಲುವಾಗಿ ಇದ್ದಕ್ಕಿದ್ದ ಹಾಗೆ ಏಪ್ರಿಲ್ 16 ಮತ್ತು 17ರಂದು ವಿಶೇಷ ಅಧಿವೇಶನವನ್ನ ಕರೆದು ಈಗಾಗಲೇ ಪಾಸ್ ಆಗಿರುವ ಮಹಿಳಾ ಬಿಲ್ ಜೊತೆಗೆ ಕ್ಷೇತ್ರಗಳ ಪುನರ್ ವಿಂಗಡನೆ ಮತ್ತು ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಮಸೂದೆಯನ್ನು ಮಂಡಿಸಿರುತ್ತಾರೆ. ಸದ್ಯದಲ್ಲಿಯೇ ಜನಗಣತಿ ಪೂರ್ಣಗೊಳ್ಳುವುದರಿಂದ ಜನಗಣತಿ ವರದಿ ಬಂದ ನಂತರ ಅದರ ಆಧಾರದ ಮೇಲೆ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡಬೇಕಾದದ್ದು ಸರಿಯಾದಂತಹ ವಿಚಾರವಾಗಿರುತ್ತದೆ. ರಾಜಕಾರಣದ ಉದ್ದೇಶದಿಂದ ಆತುರವಾಗಿ ಮಂಡಿಸಿರುವಂತಹ ಮಸೂದೆಗೆ ಕಾಂಗ್ರೆಸ್ ಪಕ್ಷ ಒಳಗೊಂಡಂತೆ ಎಲ್ಲ ವಿರೋಧ ಪಕ್ಷಗಳು ವಿರೋಧವನ್ನು ಮಾಡಿ ಲೋಕಸಭೆಯಲ್ಲಿ ಎರಡನೇ ಮೂರರಷ್ಟು ಬಹುಮತ ಆ ಮಸೂದೆಗೆ ದೊರೆಯದ ಕಾರಣದಿಂದ ಮಸೂದೆ ಮತದಾನದಲ್ಲಿ ಸೋತಿರುತ್ತದೆ. ಈಗ ಬಿಜೆಪಿಯವರು ಜನರ ದಿಕ್ಕು ತಪ್ಪಿಸುವ ಸಲುವಾಗಿ ಕ್ಷೇತ್ರ ಪುನರ್ ವಿಂಗಡನೆ ಮತ್ತು ಕ್ಷೇತ್ರದ ಸಂಖ್ಯೆಗಳ ಹೆಚ್ಚಿಸುವ ವಿಚಾರವನ್ನು ಪ್ರಸ್ತಾಪಿಸದೆ ಕೇವಲ ಕಾಂಗ್ರೆಸ್ ಪಕ್ಷ ಮಹಿಳಾ ಮಸೂದೆಗೆ ವಿರೋಧವನ್ನು ಮಾಡಿದೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರ ಶೇಕಡ 33 ರಷ್ಟು ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಇದ್ದ ಅವಕಾಶವನ್ನ ತಪ್ಪಿಸಿದ್ದಾರೆ ಎಂದು ರಾಜಕಾರಣವಾಗಿ ಮಾತನಾಡುತ್ತಿದ್ದಾರೆ.
ಈ ದೇಶದಲ್ಲಿ 1930ರಲ್ಲಿ ಮಹಿಳೆಯರಿಗೆ ಸಮಾನವಾದಂತಹ ಸ್ಥಾನಮಾನಗಳನ್ನ ಸದನಗಳಲ್ಲಿ ನೀಡಬೇಕೆಂದು ಮೋತಿಲಾಲ್ ನೆಹರುರವರು ಪ್ರಸ್ತಾಪಿಸಿದ್ದರು. ತದನಂತರ ಸಂವಿಧಾನದ ರಚನೆಯ ಸಂದರ್ಭದಲ್ಲಿಯೇ ಮಹಿಳೆಯರು ಚುನಾವಣೆಯ ನಿಲ್ಲಲು ಮತ್ತು ದೇಶದ ಎಲ್ಲ ಮಹಿಳೆಯರಿಗೆ ಪ್ರಥಮ ಚುನಾವಣೆಯಲ್ಲಿಯೇ ಮತದಾನದ ಹಕ್ಕನ್ನು ನೀಡುವ ಕಾನೂನನ್ನು ನೀಡುತ್ತಾರೆ. ರಾಜೀವ್ ಗಾಂಧಿ ಅವರು ಸಂವಿಧಾನದ 73 ,74ನೇ ಕಾಲಂಗಳಿಗೆ ತಿದ್ದುಪಡಿಯನ್ನ ತಂದು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿಯನ್ನು ಈಗಾಗಲೇ ಕಲ್ಪಿಸಿ ಕೊಟ್ಟಿದ್ದಾರೆ. ಕೆಲವು ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಶೇಕಡ 50ರಷ್ಟು ನಿಗದಿಯಾಗಿದೆ. ಕಾಂಗ್ರೆಸ್ ಪಕ್ಷ 1963ರಲ್ಲಿಯೇ ಉತ್ತರ ಪ್ರದೇಶದಲ್ಲಿ ಪ್ರಥಮ ಬಾರಿಗೆ ಸುಚಿತ್ರ ಕೃಪಲಾನಿ ಇವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ . 1972 ರಲ್ಲಿ.ತದನಂತರ ಒರಿಸ್ಸಾದಲ್ಲಿ ನಂದಿನಿ ಸತ್ಪತಿ ಇವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. 1980 ರಲ್ಲಿ ಅಸ್ಸಾಮಿನಲ್ಲಿ ಶ್ರೀಮತಿ ಅನ್ವರ್ಥೈಮೂರ್1996ರಲ್ಲಿ ಶ್ರೀಮತಿ ಭಟ್ಕಲ್ ಪಂಜಾಬಿನಲ್ಲಿ, ತದನಂತರ ದೆಹಲಿಯಲ್ಲಿ ಶ್ರೀಮತಿ ಶೀಲಾ ದೀಕ್ಷಿತ್ ರವರು 15 ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿದ್ದರು.
ದೇಶದ ಪ್ರಧಾನಿಯಾಗಿ ಶ್ರೀಮತಿ ಇಂದಿರಾ ಗಾಂಧಿಯವರು ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಕಲ್ಪಿಸಿ ಕೊಟ್ಟಿದ್ದಾರೆ.
ದೇಶದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಪಕ್ಷ ಶ್ರೀಮತಿ ಪ್ರತಿಭಾ ಪಾಟೀಲ್ ರವರನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿರುತ್ತದೆ. ಶ್ರೀಮತಿ ಮೀರಾ ಕುಮಾರಿ ರವರನ್ನು ಲೋಕಸಭೆಯ ಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಈ ರೀತಿಯಲ್ಲಿ ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಕಲ್ಪಿಸಿಕೊಟ್ಟಷ್ಟು ಅವಕಾಶಗಳನ್ನ ಬೇರೆ ಯಾವ ರಾಜಕೀಯ ಪಕ್ಷವು ಕಲ್ಪಿಸಿ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷ ಮತ್ತು ಇದರ ಜೊತೆಯಲ್ಲಿ ಕೈಜೋಡಿಸಿದ ಎಲ್ಲ ವಿರೋಧ ಪಕ್ಷಗಳ ನಿಲುವು ಒಂದೇ ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಶೇಕಡ 33% ರಷ್ಟು ಮೀಸಲಾತಿ ಕೊಡುವ ವಿಚಾರದಲ್ಲಿ ಯಾವುದೇ ಭೇದಭಾವವಿಲ್ಲ ,ಆದರೆ ರಾಜಕೀಯ ಕಾರಣಕ್ಕಾಗಿ ಕ್ಷೇತ್ರ ಪುಡವಿಂಗಡನೆ ಮತ್ತು ಕ್ಷೇತ್ರದ ಸಂಖ್ಯೆಯನ್ನು ಹೆಚ್ಚಿಸುವ 2011ರ ಜನಗಣತಿಯ ಮಾನದಂಡವನ್ನು ವಿರೋಧಿಸುತ್ತಾ ಈ ಮಸೂದೆಯ ವಿರುದ್ಧವಾಗಿ ಲೋಕಸಭೆಯಲ್ಲಿ ಮತವನ್ನು ನೀಡಿರುತ್ತಾರೆ. ಮಹಿಳೆಯರ ರಾಜಕೀಯ ಸ್ವಾತಂತ್ರ ಮತ್ತು ಅವರ ಹಕ್ಕುಗಳ ವಿಚಾರದಲ್ಲಿ ಬಿಜೆಪಿ ಅವರಿಂದ ಕಾಂಗ್ರೆಸ್ ಪಾಠ ಕಲಿಯಬೇಕಿಲ್ಲ. ಶ್ರೀಮತಿ ಸರೋಜಿನಿ ನಾಯ್ಡು ಇವರು ಸಹ ಸದನಗಳಲ್ಲಿ ಮಹಿಳೆಯರಿಗೆ ಮೀಸಲಾತಿಯ ವಿಚಾರದಲ್ಲಿ ಬಹಳ ಗಟ್ಟಿಯಾಗಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಪ್ರತಿಪಾದಿಸಿದ್ದಾರೆ. ಸಂವಿಧಾನ ಸಮಿತಿಯಲ್ಲಿ 15 ಜನ ಮಹಿಳೆಯರಿಗೆ ಅವಕಾಶ ನೀಡಲಾಗಿತ್ತು.
ಪಿ ಎಂ ಮಾಲಾತೇಶ
ನಿರ್ದೇಶಕರು :ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಕರ್ನಾಟಕ ಸರ್ಕಾರ