ಧರ್ಮಸ್ಥಳ: ಗೋ ಸಮ್ಮಾನ್ ಅಭಿಯಾನ ಸಮಿತಿಯ ಪ್ರಮುಖರು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕನ್ಯಾಡಿ ಶ್ರೀ ರಾಮ ಮಂದಿರಕ್ಕೆ ಭೇಟಿ ನೀಡಿ ಗೋರಕ್ಷಣೆ ಕುರಿತು ಜಾಗೃತಿ ಮೂಡಿಸುವ ಅಭಿಯಾನ ನಡೆಸಿದರು.


ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಕನ್ಯಾಡಿ ಶ್ರೀ ರಾಮ ಮಂದಿರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಗೋರಕ್ಷಣೆ ಪರ ಸಹಿ ಮಾಡಿದರು.
ಅಭಿಯಾನದ ಪ್ರಮುಖರಾದ ನಂದ ಬಾಬಾಜೀ, ಶ್ರೀ ಶ್ರೀ ತಾನಾಪತಿ ರವೀಂದ್ರನಂದ ಸ್ವಾಮೀಜಿ, ಜೀವನ್ ಜೀ, ವಿಶ್ವ ಹಿಂದೂ ಪರಿಷತ್ನ ಪ್ರಮುಖರಾದ ಭಾಸ್ಕರ ಧರ್ಮಸ್ಥಳ, ಶ್ರೀಗುರೂಜಿ ಹಾಗೂ ಜಿಲ್ಲಾ ಸಹಪ್ರಭಾರಿ ಅಶೋಕ ಇಳಂತಿಲ ಉಪಸ್ಥಿತರಿದ್ದರು.


