ಮೈಸೂರು: ಪರೀಕ್ಷಾ ಸ್ಪೂರ್ತಿ ಪೌಂಡೇಶನ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಇಂದು ಸರಸ್ವತಿಪುರಂನಲ್ಲಿರುವ ಜೆ.ಎಸ್.ಎಸ್.ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ರಾಜ್ಯ ಮಟ್ಟದ ಪರೀಕ್ಷಾ ಸ್ಪೂರ್ತಿ ಗುರು ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಗುರು ಶ್ರೇಷ್ಠ ಪ್ರಶಸ್ತಿ – 2025ಕ್ಕೆ ಕಾಸರಗೋಡು ಜಿಲ್ಲೆಯ, ಮಂಜೇಶ್ವರ ತಾಲೂಕಿನ,ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು ವಿದ್ಯಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎನ್.ಕೆ.ಕುಲಾಲ್.ಬೇಕೂರು ಅವರು ಸ್ವೀಕರಿಸಿದ ಕ್ಷಣ. ಮೈಸೂರಿನ ಶಾಸಕರ ಜೊತೆ, ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ಗಡಿನಾಡ ಕನ್ನಡಿಗರಿಗೆ ಇದೊಂದು ಕನ್ನಡದ ಗರಿಮೆಯಾಗಿದೆ.