ಕುಂಬಳೆ ಶಾಲೆಯಲ್ಲಿ ನಡೆಯುತ್ತಿರುವ ಕುಂಬಳೆ ಉಪ ಜಿಲ್ಲಾ ಕಲೋತ್ಸವಕ್ಕೆ ರಾಜಕೀಯ ಬಣ್ಣ ನೀಡಿ ಸಾಮರಸ್ಯ ಕೆಡವಲು ಮುಸ್ಲಿಂ ಲೀಗ್ ಯತ್ನ ಖಂಡನಿಯ :ಬಿಜೆಪಿ

ಕುಂಬಳೆ : ಕುಂಬಳೆಯಲ್ಲಿ ಜರಗುವ ಶಾಲಾ ಉಪ ಜಿಲ್ಲಾ ಮಟ್ಟದ ಕ್ರೀಡಾ ಕೂಟದ ಸ್ವಾಗತ ಗೇಟಿನ ಸಮೀಪದಲ್ಲೇ ಮುಸ್ಲಿಂ ಯೂತ್ ಲೀಗ್ ಹಸಿರು ಕೋಟೆಗೆ ಸ್ವಾಗತ ಅಂತ ಬರೆದು ಫ್ಲೆಕ್ಸ್ ಹಾಕಿರುವುದು ಎಳೆಯ ಮಕ್ಕಳ ಮನಸಿನಲ್ಲಿ ರಾಜಕೀಯ ಮತ್ತು ತಮ್ಮ ಆಜೆಂಡ ತುಂಬುವ ಪ್ರಯತ್ನ ಮತ್ತು ಕೋಮುವಾದಿ ಮನಸ್ಥಿತಿ ಎಂದು ಮುಸ್ಲಿಂ ಲೀಗ್ ನ ಕ್ರಮವನ್ನು ಬಿಜೆಪಿ ಕುಂಬಳ ಹಾಗೂ ಮಂಜೇಶ್ವರ ಮಂಡಲ ಸಮಿತಿ ಖಂಡಿಸಿದೆ.

ಬಿಜೆಪಿ ಈಗಾಗಲೇ ಶಾಲಾ ಮುಖ್ಯ ಉಪಾಧ್ಯಾಯರಿಗೆ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದೆ… Flex ಕೂಡಲೇ ತೆರವು ಮಾಡದಿದ್ದರೆ ಬೇರೆ ಬೇರೆ ಸ್ವರೂಪ ಪಡೆದರೆ ಪೊಲೀಸ್ ಇಲಾಖೆಯೇ ಜವಾಬ್ದಾರಿ ಎಂದು ಬಿಜೆಪಿ ಎಚ್ಚರಿಸಿದೆ….

ಶಾಲಾ ಕಲೋತ್ಸವದಲ್ಲಿ ಗೊಂದಲ ಸೃಷ್ಟಿಸಿದ ಮಾನಸಿಕತೆಯೇ ಕ್ರೀಡಾ ಕೂಟವನ್ನು ವರ್ಗಿಯ ಗೊಳಿಸುವ ಹುನ್ನಾರ ನಡೆಸಿದೆ ಎಂದು ಬಿಜೆಪಿ ದೂರಿದೆ…ಗುರುವಾರ 10ಗಂಟೆಯ ಒಳಗಾಗಿ ಫ್ಲೆಕ್ಸ್ ತೆರವು ಮಾಡದಿದ್ದರೆ ಬಿಜೆಪಿ ಪ್ರತಿಭತಿಸಲಿದೆ ಎಂದು ಮುನ್ನೇಚ್ಚರಿಕೆ ನೀಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!