ರಾಹುಲ್ ಗಾಂಧಿ, ಕೇಂದ್ರ ನಾಯಕರ ಬಂಧನ ಖಂಡಿಸಿ ಹೊಸಂಗಡಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಹೊಸಂಗಡಿ: ರಾಹುಲ್ ಗಾಂಧಿ ಮತ್ತು ಕೇಂದ್ರ ನಾಯಕರನ್ನು ಬಂಧಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಮಂಜೇಶ್ವರ ಮಂಡಲ ಕಾಂಗ್ರೆಸ್ ಸಮಿತಿಯ ವತಿಯಿಂದ ಹೊಸಂಗಡಿಯಲ್ಲಿ ಪ್ರತಿಭಟನಾ ಸಂಗಮ ಹಾಗೂ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಹನೀಫ್ ಪಡಿನ್ಹಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಉಪಾಧ್ಯಕ್ಷ ಮುಹಮ್ಮದ್ ಸೀಗಂದಡಿ ಸಭೆಯನ್ನು ಉದ್ಘಾಟಿಸಿದರು.


ಸಾವರ್ಕರ್ ರಂತೆ ದೇಶದ ಬೆನ್ನಿಗೆ ಇರಿದ ದ್ರೋಹಿಯ ಸ್ಥಾನವನ್ನು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಿಗೆ ಇತಿಹಾಸವು ನೀಡಲಿದೆ ಎಂದೂ, ಭಾರತೀಯರು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದೂ ಅಧ್ಯಕ್ಷೀಯ ಬಾಷಣದಲ್ಲಿ ಮಂಡಲ ಅಧ್ಯಕ್ಷರು ಕಟುವಾದ ಭಾಷೆಯಲ್ಲಿ ತೀವ್ರವಾಗಿ ಟೀಕಿಸಿದರು. ನರೇಂದ್ರ ಮೋದಿ ಮತ್ತು ಅಮಿತ್ ಶಾ ಪರವಾಗಿ ಸೇವೆ ಸಲ್ಲಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಆ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲವೆಂದೂ, ತಕ್ಷಣವೇ ರಾಜೀನಾಮೆ ನೀಡಬೇಕೆಂದು ಉದ್ಘಾಟನಾ ಭಾಷಣದಲ್ಲಿ ಮುಹಮ್ಮದ್ ಸೀಗಂದಡಿ ಆಗ್ರಹಿಸಿದರು.


ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಓಂ ಕೃಷ್ಣ, ಅಹ್ಮದ್ ಮನ್ಸೂರ್, ಇರ್ಷಾದ್ ಅಹ್ಮದ್, ಯೋಗೇಶ್ ಮಂಜೇಶ್ವರ, ಜಕರಿಯಾ ಶಾಲಿಮಾರ್, ರಂಜಿತ್, ಪ್ರಭಾಕರನ್, ಐ.ಆರ್.ಡಿ.ಪಿ. ಇಬ್ರಾಹಿಂ, ಮಾಜಿ ಮಂಡಲ ಅಧ್ಯಕ್ಷ ಉಮರ್ ಶಾಫಿ ಮಾಸ್ಟರ್ ಮುಂತಾದವರು ಮಾತನಾಡಿದರು.

ನಾಯಕರಾದ ಯು. ಅಬ್ದುರ್ರಹ್ಮಾನ್, ಅಬ್ದುರ್ರಹ್ಮಾನ್ ಹಾಜಿ, ಶಬೀರ್ ಅಹ್ಮದ್, ಮಹಾಲಿಂಗ, ಸುನಿಲ್ ಕುಮಾರ್, ಮೊಯಿದೀನ್, ತಮೀಮ್ ಮಂಜೇಶ್ವರ, ಅಬ್ದುಲ್ಲಾ ದಿಲ್ದಾರ್, ಇಲ್ಯಾಸ್, ಎಂ.ಎಚ್. ಹನೀಫ್ ಮತ್ತು ವಾರ್ಡ್ ಅಧ್ಯಕ್ಷರಾದ ಸಿದ್ದಿಕ್ ಮಂತ್ರಿ, ಸೂಫಿ ಜಮಾಲ್, ಹರೀಶ, ಇಸ್ಮಾಯಿಲ್ ಎಂ.ಕೆ., ಎಂ.ಕೆ. ಅಬ್ಬಾಸ್ ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ನಿಸಾರ್, ಜದೀರ್ ಮುಂತಾದವರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಕೆ.ಎಸ್.ಯು. ನಾಯಕ ಅಭಿನಿ ಕೃಷ್ಣ ಸ್ವಾಗತಿಸಿ ಮಂಡಲ ಕಾರ್ಯದರ್ಶಿ ಸಲಾಮ್ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!