ಮಂಗಳೂರಿನ ಮಹಾಬಲೇಶ್ವರ ಬಿಲ್ಡರ್ ಕ್ಲಾಸಿಕಲ್ ಗೇಟ್ ವೇ ಯಲ್ಲಿ ಕಾರ್ಯಾಚರಿಸುತ್ತಿರುವ ಸೊಸೈಟಿ ಸಭಾಂಗಣದಲ್ಲಿ ಜೀವನ್ ಜ್ಯೋತಿ ಮಲ್ಟಿ ಸ್ಟೇಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಕರ್ನಾಟಕದ ಕೋರ್ಡಿನೇಟರ್ಗಳು ಹಾಗೂ ಆರ್ಥಿಕ ಸಲಹೆಗಾರರ ಮಾಹಿತಿ ಶಿಬಿರ ನಡೆಯಿತು.

ಶಿಬಿರದಲ್ಲಿ ಸಂಸ್ಥೆಯ ತರಬೇತುದಾರ ಗಿರೀಶ್ ಬಾಲನ್, ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀಮತಿ ಮಹೇಶ್ವರಿ, ಬಿಎಲ್ಎಂ ಮಾರ್ಕೆಟಿಂಗ್ ಹೆಡ್ ಸಿಬಿನ್ ಹಾಗೂ ಲಕ್ಷ್ಮಿ ನಂದಿನಿ ಸೇರಿದಂತೆ ಹಲವರು ಮಾತನಾಡಿದರು.ಸಂಸ್ಥೆಯ ಕಾರ್ಯವೈಖರಿ, ಆರ್ಥಿಕ ಚಟುವಟಿಕೆಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಶಿಬಿರದಲ್ಲಿ ಮಾಹಿತಿ ಹಾಗೂ ಸಲಹೆಗಳನ್ನು ಹಂಚಿಕೊಳ್ಳಲಾಯಿತು.


ಸಭೆಯಲ್ಲಿ ಸೊಸೈಟಿಯ ಕೋರ್ಡಿನೇಟರ್ಗಳಾದ ಮುರಳಿ ಭಟ್ ಉಪ್ಪಂಗಳ ಭಾಸ್ಕರ್ ಕಾಸರಗೋಡು, ಫಲ್ಗುನನ್ ವಿರಾಜಪೇಟೆ, ಗೋವಿಂದ ಭಟ್, ಸೇರಿದಂತೆ ಹಲವು ಮಂದಿ ಭಾಗವಹಿಸಿ ತಮ್ಮ ಸಲಹೆ-ಸೂಚನೆಗಳನ್ನು ನೀಡಿರುತ್ತಾರೆ


ಕಾರ್ಯಕ್ರಮದ ಆರಂಭದಲ್ಲಿ ಮಂಗಳೂರು ಶಾಖೆಯ ಸೀನಿಯರ್ ಮ್ಯಾನೇಜರ್ ಶ್ರೀಮತಿ ಅರ್ಷಿತ ಶೆಟ್ಟಿ ಪ್ರಾರ್ಥನೆ ಹಾಡಿದರು.ಸಭೆಯ ಕೊನೆಯಲ್ಲಿ ಸಂಸ್ಥೆಯ ಅಕೌಂಟ್ ಎಕ್ಸಿಕ್ಯೂಟಿವ್ ರಾಕೇಶ್ ಅವರು ಧನ್ಯವಾದ ಅರ್ಪಿಸಿದರು.
ಶಿಬಿರವು ಸಂಸ್ಥೆಯ ಕೋರ್ಡಿನೇಟರ್ಗಳು ಹಾಗೂ ಆರ್ಥಿಕ ಸಲಹೆಗಾರರಿಗೆ ಪರಸ್ಪರ ವಿಚಾರ ವಿನಿಮಯ ಮತ್ತು ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಲು ವೇದಿಕೆಯಾಯಿತು.


