ಉಪ್ಪಳ:ಪೊಲೀಸರು ಬೆನ್ನಟ್ಟುವ ವೇಳೆ ಸೂಪರ್ ಮಾರ್ಕೆಟ್‌ಗೆ ನುಗ್ಗಿದ ಎಂಡಿಎಂಎ ಸಾಗಾಟದ ಕಾರು: ಮೂವರು ಆರೋಪಿಗಳ ಬಂಧನ

ಉಪ್ಪಳ: ಎಂಡಿಎಂಎ ಸಾಗಾಟ ಮಾಡುತ್ತಿದ್ದ ಕಾರನ್ನು ಪೊಲೀಸರು ಬೆನ್ನಟ್ಟುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಸೂಪರ್ ಮಾರ್ಕೆಟ್‌ಗೆ ನುಗ್ಗಿದ ಘಟನೆ ಉಪ್ಪಳದ ಕೈಕಂಬದಲ್ಲಿ ನಡೆದಿದೆ.

ಕರ್ನಾಟಕ ನೋಂದಣಿ ಸಂಖ್ಯೆಯ ಮಾರುತಿ ಬಲೆನೊ ಕಾರು ಕೈಕಂಬದಲ್ಲಿರುವ ಸೂಪರ್ ಮಾರ್ಕೆಟ್‌ಗೆ ನುಗ್ಗಿದೆ. ಕಾರನ್ನು ಪರಿಶೀಲಿಸಿದ ಪೊಲೀಸರು 8 ಗ್ರಾಂ ಎಂಡಿಎಂಎ ಹಾಗೂ 6 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಪ್ಪಾಯಿತೊಟ್ಟಿಯ ಅಮೀರ್, ಉಪ್ಪಳದ ಅಯಾಸ್ ಹಾಗೂ ಬಂದ್ಯೋಡಿನ ಫಾರೂಖ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ವಿಶೇಷ ತನಿಖಾ ತಂಡವಾದ ಸಾನ್ಸಾಫ್ (SANSAF) ಮತ್ತು ಮಂಜೇಶ್ವರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಇವರು ಕಳೆದ ಕೆಲವು ದಿನಗಳಿಂದ ಪೊಲೀಸರ ನಿಗಾದಲ್ಲಿದ್ದರು ಎಂದು ತಿಳಿದುಬಂದಿದೆ.

ಎಸ್‌ಪಿ ಸ್ಕ್ವಾಡ್‌ನ ಸದಸ್ಯರಾದ ಸನೂಪ್, ಆರಿಫ್, ಶೈಜು ಹಾಗೂ ಮಂಜೇಶ್ವರ ಎಸ್‌ಐ ಅರ್ಜುನ್ ಅರವಿಂದ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!