ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಕಲೋತ್ಸವ ಸಂಭ್ರಮ

ಸೂರಂಬೈಲು : ಸೂರಂಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಕಲೋತ್ಸವ ಜರಗಿತು. ಪುತ್ತಿಗೆ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಪೆರ್ಣೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಯಿದು ಸೀತಾಂಗೋಳಿ ಅಧ್ಯಕ್ಷತೆ ವಹಿಸಿದ್ದರು.

ಕಿರುತೆರೆ ಖ್ಯಾತಿಯ ಸರಿತ ಶಿವನ್ ಮುಖ್ಯ ಅತಿಥಿಯಾಗಿದ್ದರು. ಮಾತೃ ಸಂಘದ ಅಧ್ಯಕ್ಷೆ ಪ್ರಸನ್ನಕುಮಾರಿ ಕುಮಾರಮಂಗಲ, ಪಿಟಿಎ ಉಪಾಧ್ಯಕ್ಷ ಜಾನಿ ಡಿಸೋಜ, ಎಸ್ ಎಂ ಸಿ ಅಧ್ಯಕ್ಷ ಕಿರಣ್ ಕೆ, ಪಿಟಿಎ ಸದಸ್ಯ ದೇವರಾಜ್ ಆಚಾರ್ಯ ಸೂರಂಬೈಲು, ಹಿರಿಯ ಶಿಕ್ಷಕಿ ದೇವಿಕರಾಣಿ ಕೆ ಎಸ್, ಸ್ಟಾಫ್ ಸೆಕ್ರೆಟರಿ ಶರತ್ ಕುಮಾರ್ ಬೇಳ ಶುಭಾಶಂಸನೆಗೈದರು. ಮುಖ್ಯೋಪಾಧ್ಯಾಯಿನಿ ಸುನೀತ ಎ ಸ್ವಾಗತಿಸಿ ಕಲೋತ್ಸವ ಸಂಚಾಲಕಿ ಗೀತ ಕೆ ವಂದಿಸಿದರು. ಉದ್ಘಾಟನಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸ್ವಾಗತ ಗೀತೆ ಹಾಗೂ ಸ್ವಾಗತ ನೃತ್ಯ ಪ್ರದರ್ಶನ ಜರಗಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!