ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆ (ರಿ )ಮಂಜೇಶ್ವರ ಸಭೆಯಲ್ಲಿ ಮಹತ್ವದ ನಿರ್ಣಯಗಳು

ಮಂಜೇಶ್ವರ: ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆ (ರಿ.) ಮಂಜೇಶ್ವರ ಇದರ ಅಂತಿಮ ಸಭೆಯಲ್ಲಿ ಸಮಾಜಮುಖಿ ಕಾರ್ಯಗಳು, ಸದಸ್ಯರ ಕಲ್ಯಾಣ ಹಾಗೂ ಸಂಸ್ಥೆಯ ಭವಿಷ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಆಶಾ ಲೋಕೇಶ್ ಅವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಅಂಕಿತ್ ಅವರು ಧನ್ಯವಾದ ಅರ್ಪಿಸಿದರು. ಗೌರವಾಧ್ಯಕ್ಷರಾದ ನ್ಯಾಯವಾದಿ ಶ್ರೀ ನವೀನ್ ರಾಜ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಭೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಸಹಾಯವನ್ನು ಸಂಸ್ಥೆಯ ಸದಸ್ಯರಿಗೆ ಮಾತ್ರ ನೀಡಲು ನಿರ್ಧರಿಸಲಾಯಿತು. ಅಲ್ಲದೆ, ಸಂಸ್ಥೆಯ ಎಲ್ಲಾ ಸದಸ್ಯರಿಗಾಗಿ ಪ್ರವಾಸ ಆಯೋಜಿಸುವುದು, ಸಂಸ್ಥೆಗೆ ಸ್ವಂತ ಕಟ್ಟಡ ನಿರ್ಮಿಸುವ ಕುರಿತು ಚರ್ಚಿಸುವುದು ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ಯೋಜನೆ ರೂಪಿಸಲಾಯಿತು.


ಸಂಸ್ಥೆಯ ಬ್ಯಾಂಕ್ ವ್ಯವಹಾರಗಳ ಸುಗಮ ನಿರ್ವಹಣೆಗಾಗಿ ಚೆಕ್ ಸಹಿ ಅಧಿಕಾರವನ್ನು ಶಾಶ್ವತವಾಗಿ ನ್ಯಾಯವಾದಿ ಶ್ರೀ ನವೀನ್ ರಾಜ್, ಶ್ರೀಮತಿ ಆಶಾ ಲೋಕೇಶ್ ಮತ್ತು ಶ್ರೀ ಪ್ರದೀಪ್ ಮೋರತನೆ ಅವರಿಗೆ ವಹಿಸಲು ನಿರ್ಣಯಿಸಲಾಯಿತು. ಇನ್ನು ಮುಂದೆ ಸಂಸ್ಥೆಯ ಬ್ಯಾಂಕ್ ವ್ಯವಹಾರಗಳನ್ನು ನಿಗದಿಪಡಿಸಿದ ಸಹಿ ಅಧಿಕಾರಿಗಳ ಸಹಿಯ ಮೂಲಕ ನಡೆಸಲು ತೀರ್ಮಾನಿಸಲಾಯಿತು.

ಇದಲ್ಲದೆ, ಸಂಸ್ಥೆಯ ಸದಸ್ಯರಿಗೆ ಅಪಘಾತ ಅಥವಾ ಅನಾರೋಗ್ಯದಂತಹ ಅನಿರೀಕ್ಷಿತ ಸಂದರ್ಭಗಳಲ್ಲಿ ನೆರವಾಗುವ ಉದ್ದೇಶದಿಂದ ವಿಮಾ ಯೋಜನೆ ಮಾಡಿಸುವ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ಸದಸ್ಯರ ಸುರಕ್ಷತೆ ಮತ್ತು ಕಲ್ಯಾಣಕ್ಕೆ ಆದ್ಯತೆ ನೀಡುವ ಈ ಯೋಜನೆಯನ್ನು ಮುಂದುವರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಸಂಸ್ಥೆಯ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು, ಸಂಸ್ಥೆಯ ಅಭಿವೃದ್ಧಿ ಮತ್ತು ಸಮಾಜಸೇವಾ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ಸಂಕಲ್ಪ ವ್ಯಕ್ತಪಡಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!