ಕಾಸರಗೋಡು : ಬಂದಡ್ಕದ ಪಾರಡ್ಕದಲ್ಲಿ ಹೊಳೆಗೆ ಸ್ನಾನ ಮಾಡಲು ಇಳಿದ ಯುವಕನೊಬ್ಬ ನೀರಿನಲ್ಲಿ ಸುಳಿಗೆ ಸಿಲುಕಿ ಮುಳುಗಿ ನಾಪತ್ತೆಯಾಗಿದ್ದಾನೆ.

ನಾಪತ್ತೆಯಾದ ಯುವಕನನ್ನು ಮೂರ್ನಾಡ್ ಮುನ್ನಡ್ಕ ನಿವಾಸಿ ಮಾಧವನ್ ಅವರ ಪುತ್ರ ಅರ್ಜುನ್ (26) ಎಂದು ಗುರುತಿಸಲಾಗಿದೆ. ಇವರು ಗೆಳೆಯರ ಜೊತೆ ಪಯಸ್ವಿನಿ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದಾಗ, ಪಾರಡ್ಕಂ ರೆಗ್ಯುಲೇಟರ್ ಕಂ ಬ್ರಿಡ್ಜ್ ಸಮೀಪ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗಿದ್ದಾನೆ.
ವಿಷಯ ತಿಳಿದ ತಕ್ಷಣ ಕುಟ್ಟಿಕೋಲ್ನಿಂದ ಅಗ್ನಿಶಾಮಕ ದಳ ಹಾಗೂ ಕಾಸರಗೋಡಿನಿಂದ ಸ್ಕೂಬಾ ತಂಡವು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

ಆದಾಗ್ಯೂ, ಇಂದು ಬೆಳಗಿನವರೆಗೂ ಯುವಕನ ಸುಳಿವು ಸಿಕ್ಕಿಲ್ಲ. ಘಟನಾ ಸ್ಥಳಕ್ಕೆ ಆದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


The winning streaks here are insane! I had a great run last night and the withdrawal was lightning fast. phww777 is the real deal.