ಮಂಜೇಶ್ವರ : ಪೈವಳಿಕೆ, ಚಿಪ್ಪಾರು, ಕುರುಡಪದವು, ಖಂಡಿಗೆ, ಸುಂಕದಕಟ್ಟೆ ಹಾಗೂ ಗೋಳಿಕಟ್ಟೆ ಪ್ರದೇಶಗಳಲ್ಲಿ ಬಸ್ ಸೌಲಭ್ಯದ ತೀವ್ರ ಕೊರತೆಯಿಂದಾಗಿ ಜನರು ದಿನನಿತ್ಯ ಪರದಾಡುವಂತಾಗಿದೆ.

ವಿಟ್ಲ-ಬೇಡಗುಡ್ಡೆ-ಉಪ್ಪಳ-ಕುರುಡಪದವು ಮಾರ್ಗದಲ್ಲಿ ಸರಿಯಾದ ಬಸ್ ಸಂಚಾರವಿಲ್ಲದೆ ಸ್ಥಳೀಯರ ಪ್ರಯಾಣಕ್ಕೆ ಕಷ್ಟಸಾಧ್ಯವಾಗಿದೆ. ವಿಟ್ಲದಿಂದ ಬರುವ ಬಸ್ಗಳು ಕೆಲವೊಮ್ಮೆ ಲಾಲ್ಭಾಗ್ಗೆ ಟ್ರಿಪ್ ಮೊಟಕುಗೊಳಿಸುತ್ತಿವೆ.
ಬೆಳಿಗ್ಗೆ ಬೇಡಗುಡ್ಡೆಯಿಂದ ವಿಟ್ಲಕ್ಕೆ ತೆರಳುವ ಬಸ್, ರಾತ್ರಿಯಷ್ಟೇ ಹಿಂತಿರುಗುತ್ತಿದ್ದು, ಉಪ್ಪಳದಿಂದ ಬರುವ ಬಸ್ಗಳು ಕುರುಡಪದವುವರೆಗೆ ತಲುಪುತ್ತಿಲ್ಲವೆಂಬ ಆರೋಪ ಕೇಳಿ ಬಂದಿದೆ.

ಇದರಿಂದ ಸಾರ್ವಜನಿಕರು ಅಗತ್ಯ ಕೆಲಸಗಳಿಗೆ ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ. ಜೊತೆಗೆ, ಈ ಮಾರ್ಗದ ಸ್ಟೇಜ್ ವ್ಯವಸ್ಥೆ ಸರಿಯಿಲ್ಲದೆ ಹೆಚ್ಚಿನ ದರ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಈ ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


If you are looking for a reliable betting site, this is it. The odds are competitive and the site layout is very clean. My go-to is idtmbet88
Finally found a site that actually pays out consistently. The customer support team is also very helpful when I had issues with my account. Highly recommend idstudiobet78.