ಕಾಸರಗೋಡು: ಕುಂಡಂಕುಳಿ ಪಾಂಡಿ ಕಂಡ ಸಮೀಪ ಪಯಸ್ವಿನಿ ಹೊಳೆಯಲ್ಲಿ ಸ್ನಾನಕ್ಕಿಳಿದು ನಾಪತ್ತೆಯಾಗಿದ್ದ ಮುನ್ನಾಡ್ ಮನ್ನಡ್ಕದ ಮಾಧವನ್ ಪುತ್ರ ಅರ್ಜುನ (26) ಅವರ ಮೃತದೇಹ ಸೋಮವಾರ ತಡ ರಾತ್ರಿ 100 ಮೀಟರ್ ದೂರದಲ್ಲಿ ಪತ್ತೆಯಾಗಿದೆ.

ಬಾನುವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಹೊಳೆಗೆ ಇಳಿದಿದ್ದಾಗ ಅವರು ನೀರಿನಲ್ಲಿ ಮುಳುಗಿದ್ದರು. ಕುತ್ತಿಕ್ಕೊಲು ಅಗ್ನಿಶಾಮಕ ದಳದ ಸ್ಕೂಬಾ ತಂಡ, ಆದೂರು ಪೊಲೀಸರು ಹಾಗೂ ಸ್ಥಳೀಯ ನಾಗರಿಕರು ವ್ಯಾಪಕ ಶೋಧ ನಡೆಸಿದ್ದರು.

ಕೊನೆಗೆ ಸೋಮವಾರ ರಾತ್ರಿ ಶವ ಪತ್ತೆಯಾಗಿದ್ದು, ಪೊಲೀಸರು ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ.



Finally found a platform that actually pays out on time. The interface is super intuitive and easy to navigate. Great experience so far with phjili58com!
Finally found a site that doesn’t lag during big wins. The payouts are fair and the support team is quite helpful. Check out brlwinbr if you want a stable experience.