ಕಡoಬಾರು : ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಘಟಕದ ಮಹಾಸಭೆಯು ಸರಕಾರಿ ಪ್ರೌಢ ಶಾಲೆ ಕಡoಬಾರ್ ನ ಶತಮಾನೋತ್ಸವ ಸಭಾಂಗಣದಲ್ಲಿ ಜರಗಿತು.

ಬೆಳಿಗ್ಗೆ ಉಪಜಿಲ್ಲಾ ಅಧ್ಯಕ್ಷರಾದ ಅಶೋಕ್ ಕೊಡ್ಲಮೊಗರು ಧ್ವಜಾರೋಹಣ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .ನಂತರ ಪ್ರತಿನಿಧಿ ಸಮ್ಮೇಳನ ಜರಗಿತು. ಉಪಜಿಲ್ಲಾ ಸಮಿತಿಯ ಅಧ್ಯಕ್ಷರಾದ ಅಶೋಕ್ ಕೊಡ್ಲಮೊಗರುರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಉಪಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಕಿಶೋರ್ ಕುಮಾರ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ತದನಂತರ ಸಂಘಟನಾತ್ಮಕ ಚರ್ಚೆ ನಡೆಯಿತು.ಸದಸ್ಯರ ಪ್ರಶ್ನೆಗಳಿಗೆ ಕೇಂದ್ರ ಸಮಿತಿ ಅಧ್ಯಕ್ಷರಾದ ಸುಕೇಶ್, ಸಂಘಟನಾ ಕಾರ್ಯದರ್ಶಿ ಜಬ್ಬಾರ್ ಉತ್ತರಿಸಿದರು. ಸಭೆಯಲ್ಲಿ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಉಮೇಶ್ ಬಿ, ಜತೆ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ, ಉಪಜಿಲ್ಲಾ ಉಪಾಧ್ಯಕ್ಷರಾದ ಶಿವರಾಮ್ ಭಟ್, ಶಂಕರ ನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು. ಉಪಜಿಲ್ಲಾ ಜತೆ ಕಾರ್ಯದರ್ಶಿ ಅಶ್ರಫ್ ಮರ್ಥ್ಯ ಸ್ವಾಗತಿಸಿ, ಜಯಪ್ರಸಾದ್ ಪೆರ್ಮುದೆ ವಂದಿಸಿದರು. ನಯನ ಕುಮಾರ್ ಕಡoಬಾರ್ ಕಾರ್ಯಕ್ರಮ ನಿರೂಪಿಸಿದರು.


ತದನಂತರ ಜರಗಿದ ಉಪಜಿಲ್ಲಾ ಸಮ್ಮೇಳನದ ಉದ್ಘಾಟನೆಯನ್ನು ಮಂಜೇಶ್ವರ ಶಾಸಕರಾದ ಎ ಕೆ ಯಂ ಅಶ್ರಫ್ ನೆರವೇರಿಸಿದರು . ಉಪಜಿಲ್ಲಾ ಸಮಿತಿಯ ಅಧ್ಯಕ್ಷರಾದ ಅಶೋಕ್ ಕೊಡ್ಲಮೊಗರು ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಶೋಧನಾ ಪ್ರಾಧ್ಯಪಕರಾದ ರಾಜೇಶ್ ಬೆಜ್ಜoಗಳ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ನಾರಾಯಣ ದೇಲಂಪಾಡಿ, ಕನ್ನಡ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ಕಾಸರಗೋಡು ಇದರ ಸದಸ್ಯರಾದ ಪದ್ಮಾವತಿ ಐಲ, ಕೇಂದ್ರ ಸಮಿತಿ ಅಧ್ಯಕ್ಷರಾದ ಸುಕೇಶ್,ಶಾಲಾ ಮುಖ್ಯ ಶಿಕ್ಷಕರಾದ ಹರೀಶ್ ಕುಮಾರ್, ಪಿ ಟಿ ಎ ಅಧ್ಯಕ್ಷರಾದ ಬಶೀರ್ ಕನಿಲ, ಶ್ರೀನಿವಾಸ್ ರಾವ್, ಶ್ರೀಕುಮಾರಿ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.



ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಕೇಂದ್ರ ಸಮಿತಿ ಅಧ್ಯಕ್ಷರಾದ ಸುಕೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.



ಉಪಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಸ್ವಾಗತಿಸಿ, ಸದಸ್ಯರಾದ ನಿಶಿತ್ ಐಲ ವಂದಿಸಿದರು.ದಿವಾಕರ ಬಳ್ಳಾಲ್ ಮತ್ತು ಚಂದ್ರಿಕಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು.

