ಗ್ರಾಮ ಸ್ವರಾಜ್ ಟ್ರಸ್ಟ್ ಮಂಗಳೂರು (ರಿ.) ವತಿಯಿಂದ ಮಾನ್ಯ ವಿಧಾನ ಪರಿಷತ್ ಸದಸ್ಯರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷರಾದ ಡಾ. ಶ್ರೀ ಮಂಜುನಾಥ ಭಂಡಾರಿಯವರ ಹುಟ್ಟುಹಬ್ಬವನ್ನು ದೈಗೋಳಿಯ ಶ್ರೀ ಸಾಯಿನಿಕೇತನ ಸೇವಾಶ್ರಮದಲ್ಲು 200 ಜನರಿಗೆ ಅನ್ನದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸುಸಂದರ್ಭದಲ್ಲಿ ಖುದ್ದಾಗಿ ಉಪಸ್ಥಿತರಿದ್ದ ಡಾ. ಮಂಜುನಾಥ ಭಂಡಾರಿಯವರು ಆಶ್ರಮದ ಸಮಾಜಮುಖಿ,ಮಾನವೀಯ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವೈಯಕ್ತಿಕ ನೆಲೆಯಲ್ಲಿ ₹50,000 ಸಾವಿರ ದೇಣಿಗೆ ನೀಡಿದರು. ಅಲ್ಲದೆ, ಮುಂದಿನ ದಿನಗಳಲ್ಲಿಯೂ ಆಶ್ರಮದ ಕಾರ್ಯಗಳಿಗೆ ಅಗತ್ಯವಿರುವ ಸಕಲ ಬೆಂಬಲ ಸಹಾಯ ಮತ್ತು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ಮಂಗಳಕರ ಕಾರ್ಯಕ್ರಮದಲ್ಲಿ ಡಾ.ಉದಯ ಕುಮಾರ್ ಹಾಗೂ ಡಾ.ಶಾರದಮ್ಮ ಮತ್ತು ಟ್ರಸ್ಟಿಗಳು ಮಂಜುನಾಥ ಭಂಡಾರಿಯವರ ಉಜ್ವಳ ಭವಿಷ್ಯಕ್ಕಾಗಿ ಪ್ರಾರ್ಥಿಸಿ ಶುಭ ಹಾರೈಸಿದರು.

ಗ್ರಾಮ ಸ್ವರಾಜ್ ಪ್ರತಿಷ್ಠಾನ (ರಿ) ಮಂಗಳೂರು ಅದ್ಯಕ್ಷರಾದ ಶ್ರೀ.ಕುಳಾಲು ಸುಭಾಶ್ಚಂದ್ರ ಶೆಟ್ಟಿ,ಕೋಶಾಧಿಕಾರಿ ಹಾಗೂ ಮಾಜಿ ಕಾರ್ಪರೇಟರ್ ಪ್ರವೀಣ್ ಚಂದ್ರ ಆಳ್ವ,ಮಂಗಳೂರು ಗ್ಯಾರಂಟಿ ಅನು಼ಷ್ಠಾನ ಸಮಿತಿ ಅದ್ಯಕ್ಷರಾದ ಶ್ರೀ.ಸುರೇಂದ್ರ ಕಂಬಳಿ,ಮಾಜಿ ಮೇಯರ್ ಮಹಾಭಲ ಮಾರ್ಲ,ಟ್ರಸ್ಟ್ ಕಾರ್ಯದರ್ಶಿ ಲಾರೆನ್ಸ್ ಡಿ ಸೋಜಾ,ಮಂಗಳೂರು ಮಹಾನಗರ ಪಾಲಿಕೆಯ ವಿರೋದ ಪಕ್ಷದ ಮಾಜಿ ನಾಯಕರಾದ ಅನಿಲ್ ಕುಮಾರ್,
ಸುನಿಲ್ ಪೂಜಾರಿ ಮಂಗಳೂರು ರಾಕೇಶ್ ದೇವಾಡಿಗ ಮಂಗಳೂರು ಇಚ್ಚಿತ್ ಶೆಟ್ಟಿ ಕುಂದಾಪುರ, ರವಿ ಶೆಟ್ಟಿ ಉಡುಪಿ,ಕೊಳ್ನಾಡು ವಲಯ ಕಾಂಗ್ರೇಸ್ ಅದ್ಯಕ್ಷರಾದ ಪವಿತ್ರ ಪೂಂಜಾ ,ಪತ್ರಕರ್ತ ವಿ.ಟಿ.ಪ್ರಸಾದ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.


Finally a site that doesn’t lag during peak hours. The gameplay is fluid and the rewards are fair. Highly recommend phjiliph6 to everyone.
Finally found a platform that doesn’t lag during peak hours. The game variety is insane and the payouts are processed quickly. Definitely giving 288jilicasino a go again tomorrow.