ಮಂಗಳೂರು: ಉಮ್ರಾ ಯಾತ್ರೆಗೆ ಸೌದಿ ಅರೇಬಿಯಾದ ಮಕ್ಕಾ ಮತ್ತು ಮದೀನಾಕ್ಕೆ ತೆರಳಿರುವ 500ಕ್ಕೂ ಅಧಿಕ ಯಾತ್ರಾರ್ಥಿಗಳು 15 ದಿನಗಳ ಪ್ಯಾಕೇಜ್ ಪೂರ್ಣಗೊಂಡಿದ್ದರೂ ವಿಮಾನಗಳ ರದ್ದತಿ ಹಾಗೂ ಪ್ರಾದೇಶಿಕ ಉದ್ವಿಗ್ನತೆಯಿಂದ ಸ್ವದೇಶಕ್ಕೆ ಮರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾತ್ರಾರ್ಥಿಗಳ ಸುರಕ್ಷತೆ ಖಚಿತಪಡಿಸಿ, ಸುರಕ್ಷಿತವಾಗಿ ಮರಳಲು ಕೇಂದ್ರ ಮತ್ತು ರಾಜ್ಯ ಸರಕಾರ ನೆರವು ನೀಡಬೇಕು ಎಂದು ದ.ಕ. ಜಿಲ್ಲಾ ಹಜ್ ಉಮ್ರಾ ಖಾಸಗಿ ಪ್ರವಾಸಿ ಸಂಘಟನಾ ಸಂಸ್ಥೆಗಳ ಅಸೋಸಿಯೇಶನ್ ಮನವಿ ಮಾಡಿದೆ.

ಗುರುವಾರ ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಝಾಕಿರ್ ಇಕ್ಲಾಸ್, ದಮ್ಮಾಮ್, ಜಿದ್ದಾ, ಮದೀನಾ ಸೇರಿದಂತೆ ವಿವಿಧೆಡೆ ಯಾತ್ರಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ವಿಮಾನ ರದ್ದತಿಯಿಂದ ಪ್ರಯಾಣಿಕರಿಗೆ ಟಿಕೆಟ್ ಹಣ ಮರುಪಾವತಿ ವಿಳಂಬವಾಗುವ ಸಾಧ್ಯತೆಯಿದ್ದು, ಯಾತ್ರಾರ್ಥಿಗಳ ವಸತಿಗಾಗಿ ಹೋಟೆಲ್ಗಳಿಗೆ ಮುಂಗಡ ಪಾವತಿಸಿರುವ ಟ್ರಾವೆಲ್ ಸಂಸ್ಥೆಗಳೂ ಆರ್ಥಿಕ ನಷ್ಟ ಎದುರಿಸುತ್ತಿವೆ ಎಂದರು.

ವಿಮಾನಯಾನ ಸಂಸ್ಥೆಗಳು ನಿಯಮಾನುಸಾರ ಹಣ ಮರುಪಾವತಿಗೆ ಕ್ರಮ ಕೈಗೊಳ್ಳಬೇಕು. ಟ್ರಾವೆಲ್ ಸಂಸ್ಥೆಗಳ ಹೋಟೆಲ್ ಬುಕ್ಕಿಂಗ್ ನಷ್ಟ ಮತ್ತು ಮರುಪಾವತಿ ವಿಳಂಬದ ಸಮಸ್ಯೆಗಳನ್ನು ಸಂಬಂಧಪಟ್ಟವರು ಸಹಾನುಭೂತಿಯಿಂದ ಪರಿಗಣಿಸಬೇಕು. ಪ್ರಯಾಣಿಕರು ಹಣ ಮರುಪಾವತಿ ಪ್ರಕ್ರಿಯೆಗೆ ಅಗತ್ಯ ಕಾಲಾವಕಾಶ ನೀಡಿ ಟ್ರಾವೆಲ್ ಸಂಸ್ಥೆಗಳೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್ ಉಪಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ ಸೇರಿದಂತೆ ಝಾಕಿರ್, ಹಮೀದ್, ಹಸನ್ ಸಾದ್, ಇಕ್ಬಾಲ್ ಮತ್ತು ಮೊಯ್ದಿನ್ ಉಪಸ್ಥಿತರಿದ್ದರು.


I’ve been looking for a reliable platform for a while and finally found this one. The interface is super smooth and the wins are actually coming through. Highly recommend idrosohoki to everyone.