ಕಾಸರಗೋಡು : ಭಾರಿ ರಾಜಕೀಯ ಸಂಚಲನ ಮೂಡಿಸಿದ್ದ ಎಸ್‌ಡಿಪಿಐ ಕಾರ್ಯಕರ್ತ ತಳಂಗರೆಯ ಸೈನುಲ್ ಆಬೀದ್ (24) ಕೊಲೆ ಪ್ರಕರಣದ ಎಲ್ಲಾ 21 ಆರೋಪಿಗಳನ್ನು ಕಾಸರಗೋಡು ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ ಸೂಕ್ತ ಸಾಕ್ಷ್ಯಗಳಿಲ್ಲದ ಕಾರಣ ಖುಲಾಸೆಗೊಳಿಸಿದೆ.

2014 ಡಿಸೆಂಬರ್ 22ರಂದು ರಾತ್ರಿ ಎಂ.ಜಿ. ರಸ್ತೆಯಲ್ಲಿರುವ ತಂದೆಯ ಹಾಸಿಗೆ ಅಂಗಡಿಯನ್ನು ಮುಚ್ಚುತ್ತಿದ್ದ ವೇಳೆ, ಅಕ್ರಮವಾಗಿ ನುಗ್ಗಿದ ದುಷ್ಕರ್ಮಿಗಳ ಪಡೆ ಆಬೀದ್‌ನನ್ನು ತಂದೆಯ ಕಣ್ಣೆದುರೇ ಬರ್ಬರವಾಗಿ ಹತ್ಯೆ ಮಾಡಿತ್ತು.ವೈಯಕ್ತಿಕ ದ್ವೇಷದಿಂದ ಈ ಕೊಲೆ ನಡೆದಿತ್ತು ಎನ್ನಲಾಗಿತ್ತು.

ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಆಬೀದ್‌ನ ತಂದೆ ಮುಹಮ್ಮದ್ ಅವರು ನಂತರ ಹುಬ್ಬಳ್ಳಿಯಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದರು.
ಉದಯ, ಪ್ರಶಾಂತ್, ಮಹೇಶ್ ಸೇರಿದಂತೆ ಒಟ್ಟು 21 ಜನರ ವಿರುದ್ಧ ವಿಶೇಷ ಪೊಲೀಸ್ ತಂಡ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯವು ಈಗ ಎಲ್ಲರನ್ನೂ ನಿರ್ದೋಷಿ ಎಂದು ತೀರ್ಪು ನೀಡಿದೆ.

