ಮಂಜೇಶ್ವರದಲ್ಲಿ ಸಾಕುನಾಯಿಗಳ ದಾಳಿ: ಇಬ್ಬರು ವಿದ್ಯಾರ್ಥಿಗಳಿಗೆ ಗಾಯ

​ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯೊಂದಿಗೆ ಸಾಕುನಾಯಿಗಳ ಹಿಂಸೆಯೂ ಹೆಚ್ಚಾಗಿದೆ. ಶುಕ್ರವಾರ ರಾತ್ರಿ ಕುಂಜತ್ತೂರು ಸನ್ನಡಕದಲ್ಲಿ ಮದ್ರಸಾದಿಂದ ಮನೆಗೆ ಮರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ಮೇಲೆ ಸಾಕುನಾಯಿಗಳು ಕ್ರೂರವಾಗಿ ದಾಳಿ ನಡೆಸಿವೆ.

​ದಾಳಿಯಲ್ಲಿ ನಾಸಿರ್ ಮತ್ತು ಅಬ್ದುಲ್ ಸಮದ್ ಎಂಬ ಮಕ್ಕಳು ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ ವೇಳೆ ದಾರಿಯಲ್ಲಿ ಹೋಗುತ್ತಿದ್ದ ಮಕ್ಕಳ ಮೇಲೆ ನಾಯಿಗಳು ಅಚಾನಕ್ ದಾಳಿ ನಡೆಸಿ ಕಚ್ಚಿ ಗಾಯ ಗೊಳಿಸಿದೆ.

ಈ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಈಗಾಗಲೇ ತೀವ್ರವಾಗಿದ್ದು, ಇದರ ಜೊತೆಗೆ ಕೆಲವರು ಸಾಕುನಾಯಿಗಳನ್ನು ಮನೆಯ ಹೊರಗೆ ಮುಕ್ತವಾಗಿ ಬಿಡುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಮಕ್ಕಳು ಭಯದ ನೆರಳಿನಲ್ಲಿ ಓಡಾಡುವಂತಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!