ಸೂಟರ್ ಪೇಟೆ: ಈಚೆಗೆ ಬಸವಶ್ರೀ ಹಾಗೂ ‘ಸಾಧಕ ರತ್ನ’ ಪ್ರಶಸ್ತಿಗೆ ಭಾಜನರಾದ ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಅವರನ್ನು ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಶನಿವಾರ ನಡೆದ ಸಂಕ್ರಮಣ ಪೂಜೆಯ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದೈವಸ್ಥಾನದ ಗುರಿಕಾರ ಎಸ್. ರಾಘವೇಂದ್ರ ಅವರು, ಎಸ್. ಜಗದೀಶ್ಚಂದ್ರ ಅಂಚನ್ ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಇವರ ಕ್ರೀಡಾ ಬರವಣಿಗೆಯ ಸಾಧನೆ ನಮ್ಮ ಕ್ಷೇತ್ರಕ್ಕೂ ಹೆಮ್ಮೆಯ ವಿಚಾರ. ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವುದು ಸಮಾಜಕ್ಕೆ ಪ್ರೇರಣೆ ನೀಡುವ ಕಾರ್ಯವಾಗಿದೆ. ಅವರು ಕ್ರೀಡಾ ಬರವಣಿಗೆಯಲ್ಲೂ ಸಮಾಜ ಗುರುತಿಸುವಂತಹ ಸಾಧನೆ ಮಾಡಿದ್ದಾರೆ. ಅವರ ಪರಿಶ್ರಮ, ಸೇವೆಹಾಗೂ ಕೊಡುಗೆಗಳನ್ನು ಗುರುತಿಸಿ ಗೌರವಿಸುವುದರಿಂದ ಇತರರಿಗೂ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಪ್ರೋತ್ಸಾಹ ದೊರೆಯುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಕಾರ್ಪೋರೇಟರ್ ಅಪ್ಪಿ ಎಸ್. , ದೈವಸ್ಥಾನದ ಗೌರವ ಸಲಹೆಗಾರರಾದ ಕೆ.ಪಾಂಡುರಂಗ , ಎಸ್.ಬಾಬು , ಪ್ರಧಾನ ಅರ್ಚಕ ಎಸ್. ಗಣೇಶ ಪಾತ್ರಿ, ಕೋಶಾಧಿಕಾರಿ ಎಸ್. ನವೀನ್ , ಪದಾಧಿಕಾರಿಗಳಾದ ಎಸ್. ಮೋಹನ್, ಬಿ. ವಿಶ್ವನಾಥ್, ಎಸ್. ಜನಾರ್ಧನ, ಬಿ. ಗಣೇಶ್, ಎಸ್. ಸುರೇಶ್, ಎಸ್. ಪ್ರವೀಣ್. ರಂಜಿತ್, ಉಮಾಪ್ರಸಾದ್ ಎಂ., ಸುನಿಲ್ ರಾಜ್ ಪದಕಣ್ಣಾಯ, ಕಿರಣ್ ರಾಜ್ ಪದಕಣ್ಣಾಯ, ಸುದೇಶ್ ಕುಮಾರ್, ತಿಲಕ್ ರಾಜ್, ರಾಹುಲ್ ಎಸ್., ಸಂತೋಷಕುಮಾರಿ, ಕಿಶೋರ್, ರಕ್ಷಿತ್, ಪ್ರಶಾಂತ್ ಪಿ.ಎಸ್.ಸೂರಜ್ ಸಾಗರ್, ರಕ್ಷಿತ್ ಬಿ.ಎಸ್. ನಳಿನಿ ಗೋಪಾಲ್, ಶ್ರೀಮತಿ ಇಂದಿರಾ ಮೋಹನ್ದಾಸ್, ಹಾಗೂ ಪ್ರೋ. ಸುಚಿತ್ರಾ ಉಮಾಪ್ರಸಾದ್ ಉಪಸ್ಥಿತರಿದ್ದರು.

