ಪತ್ರಕರ್ತ, ಸಾಹಿತಿ ಗಿರೀಶ್ ಪಿ.ಎಂ. ಅವರಿಗೆ ‘ಕಾಸರಗೋಡು ದಸರಾ ಕವಿಸಾಧಕ ಪ್ರಶಸ್ತಿ–2026’

ಕಾಸರಗೋಡು: ಪತ್ರಕರ್ತ ಹಾಗೂ ಸಾಹಿತಿ ಗಿರೀಶ್ ಪಿ.ಎಂ. ಅವರು ‘ಕಾಸರಗೋಡು ದಸರಾ ಕವಿಸಾಧಕ ಪ್ರಶಸ್ತಿ–2026’ಕ್ಕೆ ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಕಾಸರಗೋಡು ದಸರಾ ರಾಷ್ಟ್ರೀಯ ಕವಿಸಮ್ಮೇಳನದ ಅಂಗವಾಗಿ ನಡೆಯಿತು.

ಕನ್ನಡ ಭವನ ಮತ್ತು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಆಶ್ರಯದಲ್ಲಿ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರಾಷ್ಟ್ರೀಯ ಕವಿಸಮ್ಮೇಳನ ಆಯೋಜಿಸಲಾಗಿತ್ತು.

ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಗಿರೀಶ್ ಪಿ.ಎಂ. ಅವರಿಗೆ ಕವಿಸಾಧಕ ಪ್ರಶಸ್ತಿ ಪ್ರದಾನ ಮಾಡಿರುವುದು ಅವರ ಸಾಹಿತ್ಯ ಸೇವೆಗೆ ಸಂದ ಗೌರವವಾಗಿದೆ.

ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಕವಿಗಳು ಹಾಗೂ ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!