ಪ್ರೊಬೇಷನರಿ ಪಿಎಸ್ಐ ಪ್ರತಿಭಾ ಸುನಿಲ್‌ಗೆ ಹುಟ್ಟೂರ ಸಮಾಜದ ಗೌರವ

ಹೊಸನಗರ: ಬ್ರಹ್ಮಾವರದಲ್ಲಿ ಪ್ರೊಬೇಷನರಿ ಪೊಲೀಸ್ ಉಪನಿರೀಕ್ಷಕರಾಗಿ (ಪಿಎಸ್ಐ) ಸೇವೆ ಸಲ್ಲಿಸುತ್ತಿರುವ ಪ್ರತಿಭಾ ಸುನಿಲ್ ಅವರನ್ನು ಕೋಟೆಗಾರ್ ವಿದ್ಯಾವರ್ಧಕ ಸಂಘದ ವತಿಯಿಂದ ಹುಟ್ಟೂರ ಸಮಾಜದ ಪರವಾಗಿ ಗೌರವಿಸಲಾಯಿತು.

ಕೋಟೆಗಾರ್ ವಿದ್ಯಾವರ್ಧಕ ಸಂಘ, ಹೊಸನಗರದ ಆಶ್ರಯದಲ್ಲಿ ನಡೆದ ನವರಾತ್ರಿ ಚಂಡಿಕಾಯಾಗ ಕಾರ್ಯಕ್ರಮದಲ್ಲಿ ಪ್ರತಿಭಾ ಸುನಿಲ್ ಅವರಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಪ್ರತಿಭಾ ಸುನಿಲ್ ಭಾವುಕರಾಗಿ, “ನನಗೆ ತಾಯಿ ಇಲ್ಲದಿರಬಹುದು. ಆದರೆ ಈ ಊರಿನ ಪ್ರತಿಯೊಬ್ಬರೂ, ಸಮಾಜದವರು ನನ್ನನ್ನು ತಂದೆ-ತಾಯಿಯಂತೆ ನೋಡಿಕೊಂಡಿದ್ದಾರೆ. ನಾನು ಈ ಊರಿನ ಮಗಳು. ಸಮಾಜದಿಂದ ಸಾಕಷ್ಟು ಪ್ರೋತ್ಸಾಹ ದೊರೆತಿದ್ದು, ಸಮಾಜಕ್ಕಾಗಿ ನನ್ನ ಕೈಲಾದ ಸೇವೆ ಮಾಡುತ್ತೇನೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶ್ವ ರಾಮ ಕ್ಷತ್ರಿಯ ಸಂಘದ ಅಧ್ಯಕ್ಷ ಎಚ್.ಆರ್. ಶಶಿಧರ್ ನಾಯಕ್, ಗೌರವಾಧ್ಯಕ್ಷ ಪಿ.ಆರ್. ಸಂಜೀವ್, ಯುವಕ ಸಂಘದ ಅಧ್ಯಕ್ಷ ಸತೀಶ್, ಮಹಿಳಾ ಸಂಘದ ಅಧ್ಯಕ್ಷೆ ಶ್ರೀದೇವಿ, ಗೌರವಾಧ್ಯಕ್ಷೆ ಶಾರದಾ ಪಿ. ರಾಜು ಸೇರಿದಂತೆ ಸಮಾಜದ ಮುಖಂಡರು ಹಾಗೂ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!