ಮಾನಸಿಕ ಆರೋಗ್ಯ ಸಂಪನ್ಮೂಲ ವ್ಯಕ್ತಿಗಳ ನೇಮಕಾತಿಗೆ ಅರ್ಜಿ ಆಹ್ವಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ಹಾಗೂ ಮೂಡುಬಿದಿರೆ ಶೈಕ್ಷಣಿಕ ವಲಯಗಳಲ್ಲಿ ಖಾಲಿ ಇರುವ ಎರಡು ಮಾನಸಿಕ ಆರೋಗ್ಯ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಮಾಲೋಚಕರ ಆಧಾರದ ಮೇಲೆ ಫೆಬ್ರವರಿ 2027ರವರೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಮನೋವಿಜ್ಞಾನ, ಕ್ಲಿನಿಕಲ್ ಮನೋವಿಜ್ಞಾನ, ಕೌನ್ಸೆಲಿಂಗ್ ಮನೋವಿಜ್ಞಾನ ಅಥವಾ ಸಂಬಂಧಿತ ವಿಷಯಗಳಲ್ಲಿ ಎಂ.ಎ./ಎಂ.ಎಸ್ಸಿ. ಪದವಿ ಪಡೆದ, 26ರಿಂದ 50 ವರ್ಷ ವಯೋಮಿತಿಯ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಸಕ್ತರು ಅ. 28ರೊಳಗೆ ಅರ್ಜಿಯನ್ನು ಕಚೇರಿಯಿಂದ ಪಡೆದು, ಭರ್ತಿ ಮಾಡಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಟ್ಟಡದ ಎರಡನೇ ಮಹಡಿಯಲ್ಲಿರುವ ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಕಚೇರಿಯನ್ನು ಸಂಪರ್ಕಿಸುವಂತೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

One thought on “ಮಾನಸಿಕ ಆರೋಗ್ಯ ಸಂಪನ್ಮೂಲ ವ್ಯಕ್ತಿಗಳ ನೇಮಕಾತಿಗೆ ಅರ್ಜಿ ಆಹ್ವಾನ”

Leave a Reply

Your email address will not be published. Required fields are marked *

error: Content is protected !!