ಮಾಸಪಡಿ ಪ್ರಕರಣ: ಪಿಣರಾಯಿ ವಿಜಯನ್‌ಗೆ ಸುಪ್ರೀಂ ಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್

ಕಾಸರಗೋಡು / ನವದೆಹಲಿ :​ಮಾಸಪಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ವಿಜಿಲೆನ್ಸ್ ತನಿಖೆ ಮತ್ತು ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಒಂದು ವಾರದ ಮಟ್ಟಿಗೆ ತಾತ್ಕಾಲಿಕವಾಗಿ ತಡೆಹಿಡಿದಿದೆ.

​ಆರೋಪಿಗಳ ವಾದವನ್ನು ಆಲಿಸದೇ ಕೇರಳ ಹೈಕೋರ್ಟ್ ನಿರ್ಧಾರ ತಳೆದಿದೆ ಎಂದು ಪಿಣರಾಯಿ ವಿಜಯನ್ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದರು.

ಈ ವಾದವನ್ನು ಒಪ್ಪಿಕೊಂಡ ಸುಪ್ರೀಂ ಕೋರ್ಟ್, ಹೈಕೋರ್ಟ್ ನಡವಳಿಕೆಯನ್ನು ವಿಮರ್ಶಿಸಿತು.ಒಂದೇ ದಿನದಲ್ಲಿ ಎಫ್‌ಐಆರ್ ದಾಖಲಿಸುವಂತಹ ತುರ್ತು ಏನಿತ್ತು ಎಂದು ಜಸ್ಟಿಸ್ ವಿ. ಮೋಹನ್ ಪ್ರಶ್ನಿಸಿದ್ದಾರೆ.

ಕೇರಳ ಹೈಕೋರ್ಟ್‌ನ ಸಿಂಗಲ್ ಬೆಂಚ್ ಆದೇಶವನ್ನು ಪ್ರಶ್ನಿಸಿ ಪಿಣರಾಯಿ ವಿಜಯನ್, ಟಿ. ವೀಣಾ ಮತ್ತು ಮುಹಮ್ಮದ್ ರಿಯಾಸ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.ದಸರಾ ರಜೆಯಿದ್ದರೂ ಜಸ್ಟಿಸ್ ಜೋಯ್ ಮಾಲ ಬಾಗ್ಚಿ ಮತ್ತು ಜಸ್ಟಿಸ್ ವಿ. ಮೋಹನ್ ಅವರನ್ನೊಳಗೊಂಡ ವಿಶೇಷ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಿತು.

​ಇದೇ ವೇಳೆ, ಇ.ಡಿ. ದಾಖಲಿಸಿರುವ ಪ್ರಕರಣದ ಕಾನೂನು ಸಿಂಧುತ್ವದ ಕುರಿತು ಪ್ರಸ್ತುತ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!