
ಮಂಗಳೂರು: ರಾಮಕ್ಷತ್ರಿಯ ವೃತ್ತಿಪರರ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸುವ ಉದ್ದೇಶದಿಂದ ರಾಮಕ್ಷತ್ರಿಯ ಸೇವಾ ಸಂಘ (ರಿ.), ಮಂಗಳೂರು ಇದರ ವತಿಯಿಂದ ಅ. 25ರ ಭಾನುವಾರ ಬೆಳಗ್ಗೆ 10.30ಕ್ಕೆ ಜಪ್ಪುವಿನ ರಾಮಕ್ಷತ್ರಿಯ ಸೇವಾ ಸಂಘದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ.

ಮಂಗಳೂರಿನಲ್ಲಿರುವ ರಾಮಕ್ಷತ್ರಿಯ ಸಮುದಾಯದ ವೈದ್ಯರು, ಎಂಜಿನಿಯರ್‌ಗಳು, ವಕೀಲರು ಹಾಗೂ ಚಾರ್ಟರ್ಡ್ ಅಕೌಂಟೆಂಟ್‌ಗಳು ಸೇರಿದಂತೆ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ವೃತ್ತಿಪರರು ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಮಾವೇಶದ ಯಶಸ್ವಿ ಆಯೋಜನೆಗೆ ತಮ್ಮ ಅಮೂಲ್ಯ ಸಲಹೆ ಹಾಗೂ ಸಹಕಾರ ನೀಡುವಂತೆ ಸಂಘದ ವತಿಯಿಂದ ಮನವಿ ಮಾಡಲಾಗಿದೆ.




Quick login and even quicker withdrawals. It is hard to find a platform this reliable these days. Give 55llbetlogin a shot.