ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿ ವಂಚನೆ: ಆರೋಪಿ ಸೆರೆ

ಕಾಸರಗೋಡು : ಸಾಮಾಜಿಕ ಜಾಲತಾಣದಲ್ಲಿ ಯುವತಿಯನ್ನು ಪರಿಚಯಿಸಿಕೊಂಡು, ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯನ್ನು ವಳಪಟ್ಟಣಂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ರಾಸಿಕ್ (38), ವಳಪಟ್ಟಣಂ ಪಾಪಿನಕ್ಕೇರಿ ವೆಲ್ಫೇರ್ ಶಾಲೆ ಸಮೀಪದ ನಿವಾಸಿಯಾಗಿದ್ದಾನೆ.

​ಮಲಯಿನ್‌ಕೀಳ್ ನಿವಾಸಿಯಾದ 37 ವರ್ಷದ ಯುವತಿಯೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಸಲುಗೆ ಬೆಳೆಸಿದ್ದ ರಾಸಿಕ್, ಹಲವು ಭರವಸೆಗಳನ್ನು ನೀಡಿ ಆಕೆಯ ಊರಿಗೆ ತಲುಪಿದ್ದನು.

ಬಳಿಕ ವಿವಿಧ ಸ್ಥಳಗಳಿಗೆ ಕರೆದೊಯ್ದು ದೌರ್ಜನ್ಯವೆಸಗಿ, ನೀಡಿದ್ದ ಭರವಸೆಗಳಿಂದ ಹಿಂದೆ ಸರಿದಿದ್ದನು. ಈ ಕುರಿತು ಸಂತ್ರಸ್ತೆ ಮಲಯಿನ್‌ಕೀಳ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

​ಪ್ರಕರಣದ ಗಂಭೀರತೆ ಅರಿತ ಪೊಲೀಸರು ವಳಪಟ್ಟಣಂ ಸಿಐ ಪಿ. ವಿಜೇಶ್ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆಗಾಗಿ ತಿರುವನಂತಪುರದ ಮಲಯಿನ್‌ಕೀಳ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ

SHARE
Loading spinner

Leave a Reply

Your email address will not be published. Required fields are marked *

error: Content is protected !!