ತಳಂಗರ ಕೊಲೆ ಪ್ರಕರಣ: ಮೃತ ಯುವಕನ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ

​ಕಾಸರಗೋಡು : ತಳಂಗರ ಕಡವತ್‌ನ ಕಟ್ಟಡವೊಂದರ ಕೊಠಡಿಯಲ್ಲಿ ಕೊಲೆಯಾದ ಯುವಕನನ್ನು ಕರ್ನಾಟಕದ ದಾವಣಗೆರೆ ಮೂಲದ ನಜೀಮುಲ್ಲಾ ಎಂದು ಗುರುತಿಸಲಾಗಿದೆ.ವೈಜ್ಞಾನಿಕವಾಗಿ ಗುರುತು ಪತ್ತೆ ಹಚ್ಚಲು ಡಿಎನ್‌ಎ ಪರೀಕ್ಷೆಗಾಗಿ ಆತನ ಬಂಧುಗಳು ಕಾಸರಗೋಡಿಗೆ ಆಗಮಿಸಿದ್ದಾರೆ.

​ಒಂದು ವಾರದ ಹಿಂದೆ ಹೊರಗಿನಿಂದ ಬೀಗ ಹಾಕಿದ್ದ ಕೊಠಡಿಯಿಂದ ದುರ್ವಾಸನೆ ಬಂದಾಗ ತನಿಖೆ ನಡೆಸಿದಾಗ ಕತ್ತಿಗೆ ಟವಲ್ ಬಿಗಿದು ಕೊಲೆ ಮಾಡಲಾದ ಕೊಳೆತ ಶವ ಪತ್ತೆಯಾಗಿತ್ತು. ಮೀನುಗಾರಿಕೆ ಕೆಲಸಕ್ಕಾಗಿ ನಜೀಮುಲ್ಲಾ ಮತ್ತು ಇತರ ಮೂವರು ಇಲ್ಲಿಗೆ ಬಂದಿದ್ದರು.

​ಕೊಲೆಯ ನಂತರ ಆರೋಪಿಗಳು ನಜೀಮುಲ್ಲಾನ ಮೊಬೈಲ್ ಫೋನಿನೊಂದಿಗೆ ಪರಾರಿಯಾಗಿದ್ದರು. ಕೊಠಡಿಯ ಬಾಡಿಗೆ ಪಾವತಿಸಲು ಬಳಸಿದ ಗೂಗಲ್ ಪೇ ಸಂಖ್ಯೆಯ ಆಧಾರದ ಮೇಲೆ ಪೊಲೀಸರು ದಾವಣಗೆರೆಗೆ ತೆರಳಿ ತನಿಖೆ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!