ಕಾಸರಗೋಡಿನಲ್ಲಿ ಮಹಿಳೆ ಮೇಲೆ ಪತಿಯಿಂದ ಹಲ್ಲೆ ಆರೋಪ: ಆಸ್ಪತ್ರೆಗೆ ದಾಖಲು

​

ಕಾಸರಗೋಡು : ಕೊಯಿಪ್ಪಾಡಿ ಕಡಪ್ಪುರಂ ನಿವಾಸಿ ಮುಹಮ್ಮದ್ ಅವರ ಪುತ್ರಿ ಸುಬೈದಾ (34) ಎಂಬ ಮಹಿಳೆಯ ಮೇಲೆ ಆಕೆಯ ಪತಿ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ ಎಂದು ದೂರು ದಾಖಲಾಗಿದೆ.

ಆರೋಗ್ಯ ಸಮಸ್ಯೆಯಿಂದಾಗಿ ಸುಬೈದಾ ಕಳೆದ ಒಂದು ತಿಂಗಳಿನಿಂದ ತವರು ಮನೆಯಲ್ಲಿದ್ದರು.ಅವರ ಎಂಟು ತಿಂಗಳ ಮಗು ಸೇರಿದಂತೆ ನಾಲ್ಕ ಮುದ್ದು ಮಕ್ಕಳು ಮೊಗ್ರಲ್ ಪುತ್ತೂರಿನಲ್ಲಿರುವ ಪತಿ ಸಲೀಂ ಅವರ ಮನೆಯಲ್ಲಿದ್ದರು.

ಇತ್ತೀಚೆಗೆ ತಮ್ಮ ಮಕ್ಕಳನ್ನು ನೋಡಲು ಸಲೀಂ ಅವರ ಮನೆಗೆ ಹೋದಾಗ, ಪತಿ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ ಎಂದು ಸುಬೈದಾ ಅವರ ಸಹೋದರ ತಿಳಿಸಿದ್ದಾರೆ.

​ಗಾಯಗೊಂಡ ಸುಬೈದಾ ಅವರನ್ನು ಕುಂಬಳೆ ಜಿಲ್ಲಾ ಸಹಕಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕುಂಬಳೆ ಪೊಲೀಸರು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!