ಸ್ತನ ಕ್ಯಾನ್ಸರ್ ಜಾಗೃತಿ ಶಿಬಿರ ಯಶಸ್ವಿ: ಮಹಿಳೆಯರಿಂದ ಅಭೂತಪೂರ್ವ ಸ್ಪಂದನೆ: ಸಂಶಯ ನಿವಾರಣೆ

​ಮಂಜೇಶ್ವರ: ಕುಂಜತ್ತೂರು ಅಯಾಶ್ ಕ್ಲಿನಿಕ್ ಆವರಣದಲ್ಲಿ ಶನಿವಾರ ಸಂಜೆ 4ರಿಂದ 6 ಗಂಟೆಯವರೆಗೆ ಆಯೋಜಿಸಲಾಗಿದ್ದ ವಿಶೇಷ ‘ಸ್ತನ ಕ್ಯಾನ್ಸರ್ ಜಾಗೃತಿ ಶಿಬಿರ’ವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಶಿಬಿರದಲ್ಲಿ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ಆರೋಗ್ಯ ಜಾಗೃತಿ ಮೂಡಿಸಿಕೊಂಡರು.

​ಶಿಬಿರದಲ್ಲಿ ಭಾಗವಹಿಸಿ ವಿಷಯ ಮಂಡಿಸಿದ ವೈದ್ಯೆ ಡಾ. ಸುಝೀನಾ ಸಯ್ಯದ್ ಅವರು ಮಾತನಾಡಿ (byt 1) : ಮಹಿಳೆಯರಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಸ್ತನ ಕ್ಯಾನ್ಸರ್ ಕುರಿತು ಸಮಗ್ರ ಮಾಹಿತಿ ನೀಡಿದರು.

ಸ್ತನ ಕ್ಯಾನ್ಸರ್‌ನ ಲಕ್ಷಣಗಳು, ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಮಹಿಳೆಯರು ಸ್ವಯಂ ತಪಾಸಣೆ ಮಾಡಿಕೊಳ್ಳುವ ಸರಳ ವಿಧಾನಗಳ ಬಗ್ಗೆ ವಿವರಣೆ ನೀಡಿದರು.

​”ಮಹಿಳೆಯರನ್ನು ಕಾಡುವ ಗಂಭೀರ ಆರೋಗ್ಯ ಸಮಸ್ಯೆಗಳಲ್ಲಿ ಸ್ತನ ಕ್ಯಾನ್ಸರ್ ಪ್ರಮುಖವಾಗಿದೆ. ಆದರೆ, ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ. ಪ್ರತಿಯೊಬ್ಬ ಮಹಿಳೆಯೂ ಇದರ ಲಕ್ಷಣಗಳ ಬಗ್ಗೆ ಸೂಕ್ತ ಅರಿವು ಹೊಂದಿರುವುದು ಅತ್ಯಗತ್ಯ” ಎಂದು ಅವರು ಉಲ್ಲೇಖಿಸಿದರು.

​ಉಪನ್ಯಾಸದ ನಂತರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ, ಪಾಲ್ಗೊಂಡಿದ್ದ ಮಹಿಳೆಯರು ತಮ್ಮ ಮನದಲ್ಲಿದ್ದ ಹಲವು ಅನುಮಾನಗಳನ್ನು ವೈದ್ಯರ ಬಳಿ ಕೇಳಿ ತಿಳಿದುಕೊಂಡರು. ಡಾ. ಸುಝೀನಾ ಸಯ್ಯದ್ ಅವರು ಮಹಿಳೆಯರ ಎಲ್ಲಾ ಸಂಶಯಗಳನ್ನು ನಿವಾರಿಸಿ, ಸೂಕ್ತ ಸಲಹೆಗಳನ್ನು ನೀಡಿದರು.

ಸಾಮಾಜಿಕ ಕಾಳಜಿಯೊಂದಿಗೆ ನಿರಂತರವಾಗಿ ಇಂತಹ ಜನಪರ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಕುಂಜತ್ತೂರಿನ ಅಯಾಶ್ ಕ್ಲಿನಿಕ್‌ನ ಸೇವಾ ಮನೋಭಾವಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಅತ್ಯುತ್ಕತ್ತ ವೈದ್ಯಕೀಯ ಸೌಲಭ್ಯಗಳು ಹಾಗೂ ಅನುಭವಿ ವೈದ್ಯರ ಮೂಲಕ ಗ್ರಾಮೀಣ ಭಾಗದ ಜನರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ಮಾರ್ಗದರ್ಶನ ನೀಡುವಲ್ಲಿ ಅಯಾಶ್ ಕ್ಲಿನಿಕ್ ಮಾದರಿಯಾಗಿ ಮೂಡಿಬಂದಿದೆ ಎಂದು ಉಪಸ್ಥಿತರಿದ್ದವರು ಕೊಂಡಾಡಿದರು.

​ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಮಹಿಳೆಗೂ ಸ್ತನ ಕ್ಯಾನ್ಸರ್ ಕುರಿತಾಗಿ ಉಪಯುಕ್ತ ಹಾಗೂ ಫಲಪ್ರದವಾದ ಮಾಹಿತಿಗಳು ದೊರೆತಿದ್ದು, ಇಂತಹ ಶಿಬಿರಗಳು ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮಹಿಳೆಯರು ಅಭಿಪ್ರಾಯಪಟ್ಟರು.

SHARE
Loading spinner

Leave a Reply

Your email address will not be published. Required fields are marked *

error: Content is protected !!