
ಕರಾವಳಿ ಜಿಲ್ಲೆಗಳಲ್ಲಿ ವಾತಾವರಣದ ತೇವಾಂಶ ಕಡಿಮೆ ಆಗಿದ್ದು ಚಳಿಗಾಲದಂತೆ ಒಣಹವೆ – ರಾತ್ರಿ ಮಂಜು ಕವಿದ ವಾತಾವರಣ ಆರಂಭವಾಗಿದೆ. ಮಲೆನಾಡು ಒಳನಾಡಿನ ಸಹಿತ ರಾಜ್ಯಾದ್ಯoತ ಒಣಹವೆ ಇತ್ತು.

ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿಯಲ್ಲಿ ಬಿಸಿಲಿನ ವಾತಾವರಣ ಇರಲಿದ್ದು ಎಲ್ಲಾ ಜಿಲ್ಲೆಗಳಲ್ಲಿ ಒಣಹವೆಯ ಮುನ್ಸೂಚನೆ ಇದೆ. ಹಗಲಿನ ತಾಪಮಾನ ಏರಿಕೆ ಆಗಲು ಆರಂಭವಾಗಲಿದ್ದು ರಾತ್ರಿ ತಂಪುಹವೆ ಮಂಜಿನ ವಾತಾವರಣ ಮುಂದುವರೆಯಬಹುದು. ನವೆಂಬರ್ 2 ರ ನಂತರ ಸಣ್ಣ ಪ್ರಮಾಣದ ಮಳೆಯ ಮುನ್ಸೂಚನೆ ಇದೆ.ಮಲೆನಾಡಿನಲ್ಲಿಯೂ ಚಳಿಗಾಲದ ವಾತಾವರಣ ಇರಲಿದ್ದು ರಾತ್ರಿ ಚಳಿ ಮಂಜು ಕವಿದ ವಾತಾವರಣ ಮುಂದುವರೆಯಬಹುದು.ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಒಣಹವೆಯ ವಾತಾವರಣ ಇರಲಿದೆ. ಮಳೆಯ ಮುನ್ಸೂಚನೆ ಇಲ್ಲ

ಉತ್ತರ ಒಳನಾಡಿನಲ್ಲಿ ಇವತ್ತು ಬಿಸಿಲಿನ ವಾತಾವರಣ ಇರಲಿದ್ದು ಹಗಲಿನ ಗರಿಷ್ಠ ತಾಪಮಾನ ಏರಿಕೆ ಆಗಬಹುದು. ಚಂಡಮಾರುತದ ಪ್ರಭಾವದ ಮೋಡ 29ರಿಂದ ಅಲ್ಲಲ್ಲಿ ಮೋಡ ಬರುವ ಸಾಧ್ಯತೆ ಇದೆ.

ಬಂಗಾಳಕೊಲ್ಲಿಯ ಅರ್ನಬ್ ಚಂಡಮಾರುತವು ಆಂಧ್ರದ ಕರಾವಳಿ ಸಮೀಪ ಬರುತ್ತಿದ್ದು ನಾಳೆ ಕಾಕಿನಾಡದ ಸಮೀಪ ಭೂಭಾಗ ಪ್ರವೇಶಿಸಿ ದುರ್ಬಲವಾಗಿ ಉತ್ತರ ದಿಕ್ಕಿನತ್ತ ಚಲಿಸುವ ಸಾಧ್ಯತೆ ಇದೆ. ಹಿಂಗಾರು ಮಾರುತಗಳನ್ನು ಸೆಳೆಯುವುದರಿಂದ ಹಾಗೂ ಉತ್ತರ ಭಾರತದ ಒಣಗಾಳಿ ದಕ್ಷಿಣ ಭಾರತಕ್ಕೆ ಬೀಸುವ ಕಾರಣ ದಕ್ಷಿಣ ಭಾರತದಲ್ಲಿ ಮಳೆ ಕಡಿಮೆ ಆಗಿದೆ. ನವೆಂಬರ್ ಮೊದಲ ವಾರ ಬಂಗಾಳಕೊಲ್ಲಿಯ ದಕ್ಷಿಣದಲ್ಲಿ ಇನ್ನೊಂದು ಲೋ ಪ್ರೆಷರ್ ಆಗಲಿದ್ದು ಇದರಿಂದಾಗಿ ಹಿಂಗಾರು ಮಾರುತಗಳು ಸಹಜ ಸ್ಥಿತಿಗೆ ಬರಬಹುದು. ದಕ್ಷಿಣ ಕರ್ನಾಟಕದಲ್ಲಿ ಸಣ್ಣ ಪ್ರಮಾಣದ ಮಳೆಯಾಗಬಹುದು.


