

ಕಾಸರಗೋಡು : ಪಡನ್ನ ಗಣೇಶ್‌ಮುಖ್‌ನಲ್ಲಿ ಖಾಸಗಿ ಕಟ್ಟಡದ ಮೇಲೆ ಸೌರ ಪ್ಯಾನಲ್ ಅಳವಡಿಸುತ್ತಿದ್ದ ವೇಳೆ ಕಾಲುಜಾರಿ ಬಿದ್ದು ಕಲ್ಲಿಕೋಟೆ ಮುಕ್ಕದ ಕೂಡಾರತ್ತಿ ನಿವಾಸಿ ಪಿ.ಎ. ಫೈಸಲ್ (38) ಸಾವನ್ನಪ್ಪಿದ್ದಾರೆ.

ಕಟ್ಟಡದ ಮೇಲಿದ್ದ ಪಿಪಿಸಿ ಶೀಟ್ ಮೇಲೆ ಕಾಲಿಟ್ಟಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ದುರ್ಮರಣಕ್ಕೀಡಾಗಿದ್ದಾರೆ.


