ಕುಂಬಳೆ : ಚಿರಂಜೀವಿ ಕುಂಬಳೆ ಹಾಗೂ ಜನಮೈತ್ರಿ ಪೊಲೀಸ್ ಕುಂಬಳೆ ಸಹಯೋಗದಲ್ಲಿ ನವೆಂಬರ್ 1ರಂದು ಕುಂಬಳೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಫ್ರೆಂಡ್ಸ್ ಬಾಯ್ಸ್ ಶಾಂತಿಪಳ್ಳ, ನವೋದಯ ಫ್ರೆಂಡ್ಸ್ ಕ್ಲಬ್ ಭಾಸ್ಕರ ನಗರ, ಭಾರ್ಗವ ಫ್ರೆಂಡ್ಸ್ ಕ್ಲಬ್ ಕೋಟೆಕಾರು, ಬ್ಲಡ್ ಹೆಲ್ತ್ ಲೈಫ್ ಕೇರ್ ಹಾಗೂ ಇತರ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಡೆಯುವ ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಸಮಾಲೋಚನೆಯ ಅವಕಾಶ ಕಲ್ಪಿಸಲಾಗಿದೆ.
ಅಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ ಒಂದು ಗಂಟೆ ವರೆಗೆ ಚಿರಂಜೀವಿ ಕ್ಲಬ್ ಪರಿಸರದಲ್ಲಿ ನಡೆಯುವ ಶಿಬಿರದಲ್ಲಿ ವಿವಿಧ ವೈದ್ಯಕೀಯ ವಿಭಾಗಗಳ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ಶಸ್ತ್ರಚಿಕಿತ್ಸೆ, ಅರ್ಬುದ ರೋಗ ತಜ್ಞರು, ನೇತ್ರ ತಜ್ಞರು, ಮೂಳೆ ಚಿಕಿತ್ಸಾ ತಜ್ಞರು, ಜನರಲ್ ಮೆಡಿಸಿನ್ ತಜ್ಞರು ಸೇರಿದಂತೆ ಹಲವು ವಿಭಾಗಗಳ ವೈದ್ಯರು ಆರೋಗ್ಯ ತಪಾಸಣೆ ನಡೆಸಲಿದ್ದಾರೆ.

ಆಸ್ಟರ್ ಮಿಮ್ಸ್ ಆಸ್ಪತ್ರೆ ಕಾಸರಗೋಡಿನ ಶಸ್ತ್ರಚಿಕಿತ್ಸಾ ಕ್ಯಾನ್ಸರ್ ತಜ್ಞ ಡಾ. ಅರವಿಂದ್, ಯೆನೆಪೋಯ ಆಸ್ಪತ್ರೆಯ ನೇತ್ರ ತಜ್ಞೆ ಡಾ. ಶ್ವೇತಾ ಚೋಪಾಡೆ ಸೇರಿದಂತೆ ವಿವಿಧ ಆಸ್ಪತ್ರೆಗಳ ತಜ್ಞ ವೈದ್ಯರು ಶಿಬಿರದಲ್ಲಿ ಸೇವೆ ಸಲ್ಲಿಸಲಿದ್ದಾರೆ. ಹೃದಯದ ಆರೋಗ್ಯದ ಕುರಿತು ವಿಶೇಷ ಅರಿವು ಮೂಡಿಸುವ ಕಾರ್ಯಕ್ರಮವೂ ನಡೆಯಲಿದೆ.
ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9746479822, 8660420913, 9447285527, 9847473135 ಮತ್ತು 9809216632 ಸಂಖ್ಯೆಗಳನ್ನು ಸಂಪರ್ಕಿಸಬಹುದು.

