ಕಾಸರಗೋಡು: ಮನೆಯಂಗಳದಲ್ಲಿ ರಿವರ್ಸ್ ತೆಗೆಯುತ್ತಿದ್ದ ಕಾರಿನ ಚಕ್ರದಡಿಗೆ ಬಿದ್ದು ಒಂದೂವರೆ ವರ್ಷದ ಹೂರಿನ್ ಮೆಹಬೂಬಿ ಎಂಬ ಕಂದಮ್ಮ ದಾರುಣವಾಗಿ ಸಾವನ್ನಪ್ಪಿದೆ.
ಕಣ್ಣೂರು ತಯ್ಯಲ್ ಕುರುವ ರೋಡ್ ನಿವಾಸಿ ಶಫ್‌ಕತ್, ತಮ್ಮ ಕಾರನ್ನು ಹಿಮ್ಮುಖವಾಗಿ ಚಲಾಯಿಸುತ್ತಿದ್ದ ವೇಳೆ ಆಟವಾಡುತ್ತಾ ಬಂದ ಮಗು ಕಾರಿನ ಅಡಿಗೆ ಸಿಲುಕಿಕೊಂಡಿದೆ.

ತಂದೆಯ ಗಮನಕ್ಕೆ ಬಾರದೆ ಸಂಭವಿಸಿದ ಈ ಅಘಾತದಲ್ಲಿ ಗಂಭೀರ ಗಾಯಗೊಂಡ ಮಗುವನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಈ ಸಂಬಂಧ ಅಜಾಗರೂಕತೆಯಿಂದ ವಾಹನ ಚಲಾಯಿಸಿದ ತಂದೆಯ ಮೇಲೆಯೇ ಕಣ್ಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

