ಗೋಮಾತೆಯ ರಕ್ಷಣೆಗೆ ಬೃಹತ್ ಸಂಕಲ್ಪ: ಮಂಗಳೂರಿನಲ್ಲಿ ಗೋಸಮ್ಮಾನ್ ಅಭಿಯಾನದ ನಿರ್ಧಾರ

​

ಮಂಗಳೂರು: ಕದ್ರಿಯ ವಿಶ್ವಶ್ರೀ ಕಾರ್ಯಾಲಯದಲ್ಲಿ ಪೂಜ್ಯ ಶ್ರೀ ಕಾಳಿಕಾ ಉಮಾಮಹೇಶ್ವರಿ ಸ್ವಾಮೀಜಿಗಳ ದಿವ್ಯ ಸಾನಿಧ್ಯ ಹಾಗೂ ರಾಜ್ಯ-ಜಿಲ್ಲಾ ಪ್ರಮುಖರ ಉಪಸ್ಥಿತಿಯಲ್ಲಿ ‘ಮಂಗಳೂರು ಗೋಸಮ್ಮಾನ್ ಅಭಿಯಾನ ಸಮಿತಿ’ಯ ಮಹತ್ವದ ಸಭೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಗೋಮಾತೆಯ ಪರಮವೈಭವವನ್ನು ಸಾರಲು ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಸಭೆಯ ಪ್ರಮುಖ ನಿರ್ಣಯಗಳು:
​ಬೃಹತ್ ಸಹಿ ಸಂಗ್ರಹ ಮಹಾ-ಆಂದೋಲನ: ಗೋಮಾತೆಯ ಗೌರವಾರ್ಥ ವಿದ್ಯಾರ್ಥಿ ಪರಿಷತ್, ಮಠ-ಮಾನ್ಯಗಳು ಹಾಗೂ ತಾಲೂಕು ತಂಡಗಳ ನೇತೃತ್ವದಲ್ಲಿ ಶಾಲಾ-ಕಾಲೇಜುಗಳಿಂದ ಹಿಡಿದು ಮನೆ-ಮನೆಗೆ ತೆರಳಿ ಐತಿಹಾಸಿಕ ಸಹಿ ಸಂಗ್ರಹ ಆಂದೋಲನ ನಡೆಸುವುದು.
​ಭವ್ಯ ಗೋಪಾಷ್ಟಮಿ ಸಮಾವೇಶ: ಮುಂಬರುವ ‘ಗೋಪಾಷ್ಟಮಿ’ಯ ಪುಣ್ಯದಿನದಂದು ಪ್ರತಿ ತಾಲೂಕು ಕೇಂದ್ರಗಳಲ್ಲಿ ಗೋಭಕ್ತರ ಬೃಹತ್ ಮತ್ತು ಭವ್ಯ ಸಮಾವೇಶಗಳನ್ನು ಆಯೋಜಿಸುವುದು.


​”ಗೋಮಾತೆಯ ಗೌರವ ಮತ್ತು ರಕ್ಷಣೆಗಾಗಿ ನಡೆಯುವ ಈ ಪುಣ್ಯಕಾರ್ಯದಲ್ಲಿ ಸಮಸ್ತ ಗೋಭಕ್ತರು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಕೈಜೋಡಿಸಿ, ಈ ಮಹಾ-ಆಂದೋಲನವನ್ನು ಯಶಸ್ವಿಗೊಳಿಸೋಣ” ಎಂದು ಸಮಿತಿಯ ಪ್ರಭಾರಿ ಶಿವಾನಂದ ಮೆಂಡನ್ ಹಾಗೂ ಸಹ ಪ್ರಭಾರಿ ಅಶೋಕ ಇಳಂತಿಲ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!