ಸಿಪಿಎಂ ಕಾರ್ಯಕರ್ತ ಆಸಿಫ್ ನಿಗೂಢ ಸಾವು ಪ್ರಕರಣ; ಹೊಸ ಕ್ರೈಂ ಬ್ರಾಂಚ್ ತಂಡಕ್ಕೆ ತನಿಖೆ ವಹಿಸಿದ ಗೃಹ ಸಚಿವರು!

ಪೈವಳಿಕೆ : ಗಾಳಿಯಡ್ಕದ ಸಿಪಿಎಂ ಕಾರ್ಯಕರ್ತ ಮುಹಮ್ಮದ್ ಆಸಿಫ್ (25) ಅವರ ನಿಗೂಢ ಸಾವು ಪ್ರಕರಣದ ತನಿಖೆಯನ್ನು ಕಣ್ಣೂರು ಕ್ರೈಂ ಬ್ರಾಂಚ್ ಎಸ್‌ಪಿ ನೇತೃತ್ವದ ಪ್ರತ್ಯೇಕ ತಂಡಕ್ಕೆ ವಹಿಸಿ ಗೃಹ ಸಚಿವ ರಮೇಶ್ ಚೆನ್ನಿತ್ತಲ ಆದೇಶಿಸಿದ್ದಾರೆ.

ಈ ಸಂಬಂಧ ತನಿಖಾ ತಂಡವು ಆಸಿಫ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.

​2025ರ ಜನವರಿ 15ರ ಮುಂಜಾನೆ ಮನೆಯಿಂದ ಟಿಪ್ಪರ್ ಲಾರಿಯಲ್ಲಿ ತೆರಳಿದ್ದ ಆಸಿಫ್, ಕಾಯರ್‌ಕಟ್ಟೆ ರಸ್ತೆ ಬದಿ ಲಾರಿಯೊಳಗೆ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಮರಣೋತ್ತರ ಪರೀಕ್ಷಾ ವರದಿಯಲ್ಲಿ ಹಲ್ಲೆಯ ಕುರುಹುಗಳು, ರಕ್ತದ ಕಲೆ ಹಾಗೂ ದೊಣ್ಣೆ ಪತ್ತೆಯಾಗಿದ್ದರೂ, ಸ್ಥಳೀಯ ಪೊಲೀಸರು ಮತ್ತು ಕ್ರೈಂ ಬ್ರಾಂಚ್ ತನಿಖೆಯಲ್ಲಿ ಪ್ರಗತಿ ಕಂಡುಬಂದಿರಲಿಲ್ಲ.

​ಸ್ವಂತ ಪಕ್ಷದ ಸರ್ಕಾರದಿಂದ ನ್ಯಾಯ ಸಿಗದ ಹಿನ್ನೆಲೆಯಲ್ಲಿ, ಕುಟುಂಬಸ್ಥರು ಯುಡಿಎಫ್ ನಾಯಕ ಸೋಮಶೇಖರ ಶೇಣಿ ಅವರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದರು. ಇದೀಗ ಕ್ರೈಂ ಬ್ರಾಂಚ್‌ನ ಹೊಸ ತಂಡವು ಪ್ರಕರಣದ ರಹಸ್ಯ ಭೇದಿಸಲು ರಂಗಕ್ಕಿಳಿದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!