ಅಧ್ಯಾಪಕರ ಮಾನಸಿಕ ಕಿರುಕುಳ ಆರೋಪ: ಹತ್ತನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಸಾವು

ಕಾಸರಗೋಡು : ನೀಲೇಶ್ವರದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿ ನೀರಜ್ ಸಂತೋಷ್ ಎಂಬವರು ಮನೆಯಲ್ಲಿ ನೇಣುಬಿಗಿದು ಸಾವನ್ನಪ್ಪಿದ್ದಾರೆ.

ಶಾಲೆಯ ಅಧ್ಯಾಪಕರ ಮಾನಸಿಕ ಕಿರುಕುಳ ಮತ್ತು ಮಾನಸಿಕ ಸಂಘರ್ಷಗಳೇ ಈ ಸಾವಿಗೆ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ.

​ಒಬ್ಬಳು ಹುಡುಗಿಯೊಂದಿಗೆ ಸಂಬಂಧವಿರುವ ಹಿನ್ನೆಲೆಯಲ್ಲಿ ಅಧ್ಯಾಪಕರು ನೀರಜ್ ಅವರನ್ನು ಶಾಲೆಯ ಸ್ಟೋರ್ ರೂಮ್‌ನಲ್ಲಿ ದಿನವಿಡೀ ಕೂಡಿಹಾಕಿ ಮಾನಸಿಕವಾಗಿ ಹಿಂಸಿಸಿದ್ದರು ಎಂದು ದೂರಲಾಗಿದೆ.

ಸೋಮವಾರದಂದು ಯಾರೋ ಹಲ್ಲೆ ನಡೆಸಿದ್ದರಿಂದ ಅವರ ಮುಖದಲ್ಲಿ ಪೆಟ್ಟಿನ ಗುರುತುಗಳೂ ಇದ್ದವು. ಈ ಮರಣದಲ್ಲಿ ನಿಗೂಢತೆ ಇರುವ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಕಾಂಞಂಗಾಡ್ ಡಿ.ವೈ.ಎಸ್.ಪಿಗೆ ದೂರು ನೀಡಿದ್ದಾರೆ.

ಈ ಕುರಿತು ನೀಲೇಶ್ವರ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!