ಮಂಜೇಶ್ವರದಲ್ಲಿ ಪ್ರಪ್ರಥಮ ಬಾರಿಗೆ ಫುಡ್ ಫೆಸ್ಟಿವಲ್ ಹಾಗೂ ಬ್ಯುಸಿನೆಸ್ ಎಕ್ಸ್‌ಪೋ ಆಯೋಜನೆ

ಮಂಜೇಶ್ವರ: ಹಲಸು ಮೇಳದ ಯಶಸ್ವಿ ಆಯೋಜನೆಯ ಬಳಿಕ ಕುಂದಾಪುರದ ಬೆನಕ ಇವೆಂಟ್ಸ್ ಮತ್ತೊಂದು ವಿನೂತನ ಕಾರ್ಯಕ್ರಮದೊಂದಿಗೆ ಸಪ್ತಭಾಷಾ ಸಂಗಮ ಭೂಮಿ ಮಂಜೇಶ್ವರಕ್ಕೆ ಆಗಮಿಸುತ್ತಿದೆ.

ಮಂಜೇಶ್ವರದಲ್ಲಿ ಪ್ರಪ್ರಥಮ ಬಾರಿಗೆ ಬೃಹತ್ ಫುಡ್ ಫೆಸ್ಟಿವಲ್ ಹಾಗೂ ಬ್ಯುಸಿನೆಸ್ ಎಕ್ಸ್‌ಪೋ ಆಯೋಜಿಸಲಾಗಿದ್ದು, ಡಿಸೆಂಬರ್ 4, 5 ಮತ್ತು 6ರಂದು ಮೂರು ದಿನಗಳ ಕಾಲ ನಡೆಯಲಿದೆ.

ಮಂಜೇಶ್ವರದ ಮೆಜೆಸ್ಟಿಕ್ ಮ್ಯಾನರ್ (ಕಲಾ ಸ್ಪರ್ಶ) ಸಭಾಂಗಣದಲ್ಲಿ ಈ ವಿಶೇಷ ಮೇಳ ನಡೆಯಲಿದ್ದು, ವಿವಿಧ ಬಗೆಯ ಖಾದ್ಯಗಳ ರುಚಿಯನ್ನು ಸವಿಯುವ ಅವಕಾಶ ಆಹಾರಪ್ರಿಯರಿಗೆ ದೊರೆಯಲಿದೆ.

ಹಲವು ಹೊಸತನಗಳೊಂದಿಗೆ ಆಯೋಜನೆಗೊಳ್ಳುತ್ತಿರುವ ಈ ಫುಡ್ ಫೆಸ್ಟಿವಲ್‌ನಲ್ಲಿ ವೈವಿಧ್ಯಮಯ ಆಹಾರ ಮಳಿಗೆಗಳು ಹಾಗೂ ಬ್ಯುಸಿನೆಸ್ ಎಕ್ಸ್‌ಪೋ ಪ್ರಮುಖ ಆಕರ್ಷಣೆಯಾಗಲಿವೆ.

ಹಾಗಾದರೆ ಆಹಾರಪ್ರಿಯರೇ, ಹೊಸ ಹೊಸ ಖಾದ್ಯಗಳ ರುಚಿ ಸವಿಯಲು ಸಿದ್ಧರಾಗಿ. ಡಿಸೆಂಬರ್ 4, 5 ಮತ್ತು 6ರಂದು ಮಂಜೇಶ್ವರದಲ್ಲಿ ನಡೆಯುವ ಈ ರುಚಿಯ ಹಬ್ಬಕ್ಕೆ ಭೇಟಿ ನೀಡಲು ಮರೆಯದಿರಿ!

SHARE
Loading spinner

Leave a Reply

Your email address will not be published. Required fields are marked *

error: Content is protected !!