ಮನೆಗೆ ನುಗ್ಗಿ 63ರ ಹರೆಯದ ವ್ಯಕ್ತಿಗೆ ಚೂರಿ ಇರಿತ; ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ ಪರಾರಿ

ಕುಂಬಳೆ : ಪಚ್ಚಂಬಳ ಸಫಾನಗರದಲ್ಲಿ ಗುರುವಾರ ಮುಂಜಾನೆ 1 ಗಂಟೆ ಸುಮಾರಿಗೆ ಮನೆಯಲ್ಲಿ ನಿದ್ರಿಸುತ್ತಿದ್ದ ಮುಹಮ್ಮದ್ (63) ಅವರನ್ನು ಸಫಾ ನಗರದ ಇರ್ಷಾದ್ ಯಾನೆ ಲುಟಾಪಿ ಎಂಬಾತ ಕರೆದು ಎಬ್ಬಿಸಿ, ಸಾರಾಸಾಗಟವಾಗಿ ಇರಿದು ಗಂಭೀರ ಗಾಯಗೊಳಿಸಿದ್ದಾನೆ.

​ಸಂತ್ರಸ್ತರ ಚೀರಾಟ ಕೇಳಿ ಧಾವಿಸಿದ ಸ್ಥಳೀಯರು ತಕ್ಷಣವೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಇರ್ಷಾದ್, ಕಾಪಾ ಕಾಯ್ದೆಯಡಿ ಅಪರಾಧ ಹಿನ್ನೆಲೆ ಹೊಂದಿದವನಾಗಿದ್ದಾನೆ.

ಈತನಿಂದ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ನಾಗರಿಕರು ಮುಂಚಿತವಾಗಿಯೇ ಪೊಲೀಸರಿಗೆ ಎಚ್ಚರಿಸಿದ್ದರು.

ಘಟನಾ ಸ್ಥಳಕ್ಕೆ ಕುಂಬಳೆ ಸಿಐ ಆರ್.ಪಿ. ಅನೂಪ್‌ಕೃಷ್ಣ ಹಾಗೂ ಎಸ್‌ಐ ಎಸ್. ಅನೂಪ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!